ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿರೋಧಿ ಬರ್ನಾಡ್ ಮೊರಾಸ್ ರಾಜ್ಯ ಬಿಟ್ಟು ತೊಲಗಲಿ

By Mahesh
|
Google Oneindia Kannada News

Protest Against Bernard Moras
ಬೆಂಗಳೂರು, ಜು.17: ಆರ್ಚ್ ಬಿಷಪ್ ಡಾ.ಬರ್ನಾಡ್ ಮೊರಾಸ್‌ರ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ನಗರದ ಸ್ವಾತಂತ್ರ ಉದ್ಯಾನವನದಲ್ಲಿಂದು ಪ್ರತಿಭಟನೆ ನಡೆಸಿತು.

ಬರ್ನಾಡ್ ಮೊರಾಸ್ ಅವರು ಕನ್ನಡದ ಕ್ರೈಸ್ತರಿಗೆ ಮನ್ನಣೆ ನೀಡದೆ ಅನ್ಯಭಾಷಿಕರಿಗೆ ಮನ್ನಣೆ ನೀಡುತ್ತಿದ್ದಾರೆ. ನಗರದ ಮಹಾಧರ್ಮಾಧ್ಯಕ್ಷರಾಗಿ 7ನೆ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗೆ ಯಾವುದೇ ಆದ್ಯತೆ ಸಿಕ್ಕಿಲ್ಲ ಎಂದು ಕ್ರೈಸ್ತ ಸಂಘದ ಪ್ರಧಾನ ಕಾರ್ಯದರ್ಶಿ ದೂರಿದ್ದಾರೆ.

ಮೈಸೂರು ಮಹಾರಾಜರು ನೀಡಿದ ಮಲ್ಲೇಶ್ವರಂ ಸೇಂಟ್ ಪೀಟರ್ ಸೆಮಿನರಿ ಜಾಗದಲ್ಲಿ ಹೊರ ರಾಜ್ಯದ ಕ್ರೈಸ್ತರನ್ನು ತಂದು ಕೂರಿಸಲಾಗಿದೆ.ಅಲ್ಲಿ ಪ್ರಾದೇಶಿಕ ಗುರುಮಠವನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ಕಳೆದ 25 ವರ್ಷಗಳಿಂದ ಕನ್ನಡ ಕ್ರೈಸ್ತರ ಬಗ್ಗೆ ಹೋರಾಟ ಮಾಡುತ್ತಿದ್ದರೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಗುರುಪೀಠದಲ್ಲಿ ಕುಳಿತವರು ತಾರಾತಮ್ಯ ಮಾಡುವುದು ಸರಿಯಲ್ಲ. ರಾಜ್ಯದಿಂದ ಬಂದಂಥ ಅನೇಕ ಕ್ರೈಸ್ತ ಗುರುಗಳು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಡಾ.ಬರ್ನಾಡ್ ಮೊರಾಸ್ ಅವರ ಹೆಸರು ಸೇರಿದೆ ಎಂದರು.

ಕನ್ನಡಕ್ಕೆ ಆದ್ಯತೆ ನೀಡಿ: ನಗರದ ಎಲ್ಲ ಚರ್ಚ್‌ಗಳಲ್ಲಿ ಕನ್ನಡ ಬಳಸುವಂತಾಗಬೇಕು. ಕನ್ನಡ ಮಾತನಾಡುವ ಗುರುಗಳನ್ನು ನೇಮಕ ಮಾಡಬೇಕು . ಕ್ರೈಸ್ತ ಕನ್ನಡಿಗರಿಗೆ ಬೋರ್ಡಿಂಗ್ ವ್ಯವಸ್ಥೆಯಾಗಬೇಕು. ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡಲು ಚರ್ಚ್‌ಗಳು ಸಹಕರಿಸಬೇಕು. ಸೌಲಭ್ಯಗಳನ್ನು ನೀಡಲು ವಿಫಲರಾದರೆ ಬರ್ನಾಡ್ ಮೊರಾಸ್ ಅವರು ರಾಜ್ಯಬಿಟ್ಟು ತೊಲಗಬೇಕು ಎಂದು ಕೈಸ್ತ ಸಂಘಟನೆಗಳು ಒತ್ತಾಯ ಮಾಡಿದೆ.

English summary
Karnataka catholic Christians association and Dr Rajkumar Fans Association lead by SR Govind protested against Archbishop Bernad Moras. Moras has been showing anti Kannada attitude and Kannada Christians are suffering not getting enough hostel and education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X