ಅಜ್ಮಲ್ ಕಸಬ್ ಗೆ ಹುಟ್ಟುಹಬ್ಬದ ಶುಭಾಶಯಗಳು!

Pak terrorist Ajmal Kasab
ಮುಂಬೈ, ಜು. 13 : ಬುಧವಾರ ಸಾಯಂಕಾಲ ಸಂಭವಿಸಿದ ಮುಂಬೈ ಸ್ಫೋಟಕ್ಕೂ 26/11 ರ ಮುಂಬೈ ಮಾರಣಹೋಮದ ಪಶು ಕಸಬ್ ಹುಟ್ಟಿದ ಹಬ್ಬಕ್ಕೂ ಏನಾದರೂ ಸಂಬಂಧ ಇದೆಯೇ?

ಇದೆ ಎಂದು ಚೀರುವ ಸುದ್ದಿಗಳು ವಾರ್ತಾ ವಾಹಿನಿಗಳಲ್ಲಿ ಹರಿದಾಡುತ್ತಿವೆ. ವಿಕಿಪೀಡಿಯದ "ಕಸಬ್ ಮಾಹಿತಿ" ಪುಟದ ಪ್ರಕಾರ ಕಸಬ್ ನ ಜನ್ಮ ದಿನಾಂಕ ಸೆಪ್ಟೆಂಬರ್ 13.

ಆದರೆ, ಜುಲೈ 13 ಭಾನುವಾರ ಸಂಜೆ ಉಂಟಾದ ವಿಕಿ ಪೇಜ್ ಎಡಿಟಿಂಗ್ ಚಮತ್ಕಾರದಿಂದಾಗಿ ಕಸಬ್ ನ ಹುಟ್ಟಿದಹಬ್ಬ ಇಂದೇ, ಜುಲೈ 13 ಎಂದು ಮಾರ್ಪಾಟಾಗಿದ್ದು ನಾನಾ ಗೊಂದಲಕ್ಕೆ ಕಾರಣವಾಯಿತು. ಕಳೆದ 15 ಗಂಟೆಗಳಲ್ಲಿ 15 ಬಾರಿ ಎಡಿಟ್ ಆದ ಹೆಗ್ಗಳಿಕೆ ಕಸಬ್ ಪುಟಕ್ಕೆ ಸಂದಿತು.

ಹತ್ತಿ ಉರಿಯುತ್ತಿರುವ ಬೆಂಕಿ ಆರಿಸುವುದನ್ನು ಬಿಟ್ಟು, ತುರ್ತು ಅಗತ್ಯವಿರುವವರಿಗೆ ರಕ್ತ ದಾನ ಮಾಡುವ ಮಾಹಿತಿ ನೀಡುವುದನ್ನು ಬಿಟ್ಟು ಮಾಧ್ಯಮಗಳು ಕಸಬನ ಜನ್ಮ ನಕ್ಷತ್ರ, ಕುಂಡಲಿ ಹುಡುಕಲು ಹೊರಟಿದ್ದು ಕುಚೋದ್ಯವಾಗಿತ್ತು.

ಬಿಬಿಸಿ ನ್ಯೂಸ್ ಕೂಡ ವಿಕಿಪೀಡಿಯ ಪುಟ ನೋಡೇ ಬರೆದಿರಬೇಕು. ತನ್ನ ಬುಧವಾರದ ಸಂಜೆ ವಾರ್ತೆಯಲ್ಲಿ ಕಸಬನ ಹುಟ್ಟಿದ ಹಬ್ಬ ಜುಲೈ 13 ಎಂದು ಪ್ರಸಾರ ಮಾಡಿ ಗೊಂದಲಕ್ಕೆ ಮತ್ತಷ್ಟು ನೀರೆರೆಯಿತು. ಕಸಬ್ ಯಾವತ್ತಾದರೂ ಹುಟ್ಟಲಿ. ಯಾವತ್ತಾದರೂ ಸಾಯಲಿ. ನಮ್ಮ ಮೊದಲ ಗಮನ, ಮೊದಲ ಆದ್ಯತೆ, ದೇಶವಾಸಿಗಳ ರಕ್ಷಣೆ ಕಡೆ ಇರಬೇಕು. [ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011]

ವಿಡಿಯೋ 1 : ಮುಂಬೈ ಮೇಲೆ ಮತ್ತೆ ದಾಳಿ

ವಿಡಿಯೋ 2 : ಮೂರು ಕಡೆ ಸ್ಫೋಟ, ಸಾವು ನೋವು

ವಿಡಿಯೋ 3 : ಸರಕಾರ ಏನು ಮಾಡುತ್ತಿದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+