ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ತ್ರೈಮಾಸಿಕ: ಲಾಭ ಶೇ.5 ರಷ್ಟು ಕೆಳಮುಖ

By Mahesh
|
Google Oneindia Kannada News

Infosys Q1 report 2011
ಬೆಂಗಳೂರು ಜು 12: ಮಾಹಿತಿ ತಂತ್ರಜ್ಞಾನ ದಿಗ್ಗಜ, ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತುದಾರ ಕಂಪೆನಿ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರಥಮ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಇಳಿಮುಖ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ5.2ರಷ್ಟು ಕುಸಿತ ದಾಖಲಿಸಿದ್ದು ಒಟ್ಟು 1,722 ಕೋಟಿ ರೂಪಾಯಿಗಳ ಲಾಭ ದಾಖಲಿಸಿದೆ. ಕಂಪೆನಿ ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1,818 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿತ್ತು.

ಆದರೆ ಕಂಪೆನಿಯ ಒಟ್ಟು ಲಾಭದಲ್ಲಿ ಶೇ 12.3 ರಷ್ಟು ಏರಿಕೆ ದಾಖಲಾಗಿದ್ದು, ಒಟ್ಟು ಲಾಭ 7,929 ಕೋಟಿ ರೂಪಾಯಿ ದಾಖಲಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಒಟ್ಟು ಲಾಭ 7,055 ಕೋಟಿ ರೂಪಾಯಿಗಳಾಗಿವೆ. ವಾರ್ಷಿಕ ಲೆಕ್ಕದಲ್ಲಿ ಇನ್ಫೋಸಿಸ್ ನ ನಿವ್ವಳ ಲಾಭದಲ್ಲಿ ಶೇ15.7 ರಷ್ಟು ಏರಿಕೆ ದಾಖಲಾಗಿದೆ.

ಕಂಪೆನಿಯ ಆದಾಯ ಮೊದಲ ತ್ರೈಮಾಸಿಕದಲ್ಲಿ 7,485 ಕೋಟಿ ರೂಪಾಯಿಗಳಿಗೇರಿದ್ದು ಹಿಂದಿನ ವರ್ಷ ಇದೇ ಅವಧಿಯಲ್ಲಿ 6,198 ಕೋಟಿ ರೂಪಾಯಿಗಳ ಆದಾಯ ದಾಖಲಿಸಿದ್ದು ಒಟ್ಟು ಶೇ 20.76 ರಷ್ಟು ಹೆಚ್ಚಳ ದಾಖಲಾಗಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಒಟ್ಟು 92 ಕ್ಲೈಂಟ್ ಗಳನ್ನು ಹಾಗೂ 9,922 ಉದ್ಯೋಗಿಗಳ ನೇಮಕಾತಿ ನಡೆದಿದೆ. ಜೂ. 30ಕ್ಕೆ ಅನ್ವಯವಾಗುವಂತೆ 1,33,560 ಉದ್ಯೋಗಿಗಳನ್ನು ಇನ್ಫಿಹೊಂದಿದೆ. 2,740 ಮಂದಿ ಇಂಡಕ್ಷನ್ ತರಬೇತಿಯಲ್ಲಿದ್ದಾರೆ. ಬಿಎಸ್ ಇಯಲ್ಲಿ ಷೇರುಗಳು 4.49% ಇಳಿಮುಖ ಕಂಡಿತ್ತು.

English summary
India's second largest software exporter Infosys reports 5.3% quarter-on-quarter decline in consolidated net profit for the first quarter ended June 30,2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X