ನೆಟ್ವರ್ಕಿಂಗ್ ಕಿಂಗ್ ಸಿಸ್ಕೋದಲ್ಲಿ ಲೇಆಫ್ ಡಿಸ್ಕೋ ನರ್ತನ

ಗ್ಲೀಚರ್ ಅಂಡ್ ಕಂ.ಯ ವಿಶ್ಲೇಷಕ ಬ್ರಿಯಾನ್ ಮಾರ್ಷಲ್ ಅವರ ಪ್ರಕಾರ, ಸಿಸ್ಕೋ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಉದ್ಯೋಗಿಗಳನ್ನು ಕಿತ್ತೊಗೆಯುವ ಯಜ್ಞ ನಡೆಯುತ್ತಿರುವುದು ಇದು ಮೊದಲ ಬಾರಿ. ಆರ್ಥಿಕ ಹಿಂಜರಿತದ ಮಡುವಿನಲ್ಲಿ ಅಮೆರಿಕಾ ಒದ್ದಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.
ಕೆಲಸಗಾರರ ಸಂಖ್ಯೆ ಕಡಿಮೆ ಮಾಡುವ ಮಾತುಗಳು ಸಿಸ್ಕೋದಲ್ಲಿ ಕೆಲ ತಿಂಗಳಿನಿಂದಲೇ ಚಾಲ್ತಿಯಲ್ಲಿದ್ದವು. ಈ ಪ್ರಕಟಣೆ ಇನ್ನೊಂದು ವಾರದಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಇದರಿಂದಾಗಿ ವಾರ್ಷಿಕ 1 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ. ಒಂದು ಸಾವಿರದಷ್ಟು ನೌಕರರು ತಾವಾಗಿಯೇ ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳಲಿದ್ದು, ನಾಲ್ಕು ಸಾವಿರ ಜನರನ್ನು ಸಿಸ್ಕೋ ಕಿತ್ತುಬಿಸಾಡಲಿದೆ.
ಜು.12ರಂದು ಲಾಸ್ ವೇಗಾಸ್ ನಲ್ಲಿ 'ಸಿಸ್ಕೋ ಲೈವ್' ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಂಪನಿಯ ಸಿಇಓ ಜಾನ್ ಚೇಂಬರ್ಸ್ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications