ದೀಪಾವಳಿಗೆ 10 ಗ್ರಾಮ್ ಚಿನ್ನದ ಬೆಲೆ 25,000 ರೂ!

ಯೂರೋಪಿನ ಆರ್ಥಿಕ ಬಿಕ್ಕಟ್ಟು, ಅಮೆರಿಕದ ನಿಧಾನ ಗತಿಯ ಚೇತರಿಕೆಯಿಂದ ಜನರು ಚಿನ್ನ ಹಾಗೂ ಬೆಳ್ಳಿಯ ಹೂಡಿಕೆಯನ್ನು ಮುಂದುವರಿಸಿರುವುದರಿಂದ ಬೆಳ್ಳಿ ದರವೂ ಕೆಜಿಗೆ 65,000 ರೂಪಾಯಿಗಳನ್ನು ತಲುಪಲಿದೆ ಎನ್ನಲಾಗಿದೆ.
ಈಗ ಮಾರುಕಟ್ಟೆಯಲ್ಲಿ ಚಿನ್ನದ ದರ 22,450 ಹಾಗೂ ಬೆಳ್ಳಿ ದರ ಕಿಲೋಗೆ 54,700 ರೂಪಾಯಿಗಳಷ್ಟಿದೆ. ಅಮೆರಿಕದಲ್ಲಿ ನಿರುದ್ಯೋಗ ದರ ಮೇ ತಿಂಗಳಿಗಿಂತ ಜೂನ್ ತಿಂಗಳಿನಲ್ಲಿ ಏರಿಕೆ ದಾಖಲಿಸಿರುವುದರಿಂದ ಆರ್ಥಿಕ ಹಿಂಜರಿತ ಚೇತರಿಕೆ ಅಸ್ಥಿರವಾಗಿದೆ. ಹೂಡಿಕೆದಾರರ ವಿಶ್ವಾಸ ಕುಸಿತ ಮಾಡಿದೆ ಎಂದು ಹೇಳಲಾಗಿದೆ.
ಲಿಬಿಯಾದ ಅಸ್ಥಿರತೆ ಕೂಡ ತೈಲ ಬೆಲೆಯಲ್ಲಿ ಏರು ಪೇರು ದಾಖಲಿಸಲಿದೆ. ವಿಶ್ವದ ಒಟ್ಟು ಚಿನ್ನದ ಬೇಡಿಕೆಯ ಶೇ.51 ರಷ್ಟು ಪಾಲನ್ನು ಭಾರತ ಹಾಗೂ ಚೀನಾ ಹೊಂದಿದ್ದು, ಈ ವರ್ಷ ಇದು ಶೇ.58ಕ್ಕೇರುವ ಸಾದ್ಯತೆ ಇದೆ. ಹೂಡಿಕೆದಾರರ ಖರೀದಿ ಆಸಕ್ತಿಯಿಂದಲೇ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications