ಮುಖೇಶ್ ರಿಲಯನ್ಸ್ ನಿಂದ 1 ಲಕ್ಷ ಕೋಟಿ ರೂ ಹೂಡಿಕೆ

Mukhesh Ambani
ಮುಂಬೈ ಜು 10: ದೇಶದ ಅತೀ ದೊಡ್ಡ ಕಂಪೆನಿ ಕೋಟ್ಯಾಧಿಪತಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮುಂದಿನ ಕೆಲ ವರ್ಷಗಳಲ್ಲಿ ವಿವಿಧ ವ್ಯಾಪಾರಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್ ನ ಭವಿಷ್ಯದ ಪಾಲುದಾರನಾಗಲಿರುವ ಬ್ರಿಟಿಷ್ ಪೆಟ್ರೋಲಿಯಂಗೆ ಸಲಹೆಗಾರನಾಗಿರುವ ಜಾಗತಿಕ ಹೂಡಿಕೆ ಸಲಹಾ ಕಂಪೆನಿ ಮೋರ್ಗಾನ್ ಸ್ಟಾನ್ಲಿ ಈ ವಿಷಯ ತಿಳಿಸಿದ್ದು ಬಹುತೇಕ ಹೂಡಿಕೆ ತೈಲ ಅನ್ವೇಷಣೆ ಹಾಗೂ ಉತ್ಪಾದನೆಗೆ ಮಾಡಲಾಗುವದು ಎನ್ನಲಾಗಿದೆ.

ರಿಲಯನ್ಸ್ ನ ನಗದು ಹರಿವಿನ ಪ್ರಮಾಣ ಹೂಡಿಕೆಗಿಂತ ಅತೀ ಹೆಚ್ಚಾಗಿದೆ. ಬ್ರಿಟಿಷ್ ಪೆಟ್ರೋಲಿಯಂ ತನ್ನ ಹಾಗೂ ರಿಲಯನ್ಸ್ ನ ಪಾಲುದಾರಿಕೆ ಸಲಹೆಗಾಗಿ ಮೋರ್ಗಾನ್ ಸ್ಟಾನ್ಲಿಯನ್ನು ನೇಮಕ ಮಾಡಿಕೊಂಡಿದೆ. ಸ್ಟಾನ್ಲಿ ವರದಿಯ ಪ್ರಕಾರ ರಿಲಯನ್ಸ್ 40 ರಿಂದ 50 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಪೆಟ್ರೋಕೆಮಿಕಲ್ಸ್ ಉದ್ಯಮದಲ್ಲಿ ಮುಂದಿನ 5 ವರ್ಷಗಳಲ್ಲಿ ಹೂಡಿಕೆ ಮಾಡಲಿದೆ.

ಇದರಲ್ಲಿ ಶೇಲ್ ಅನಿಲ ಯೋಜನೆಯಲ್ಲಿ ಮೂರು ಹಂತಗಳಲ್ಲಿ 18 ರಿಂದ 27 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಕಳೆದ ಏಪ್ರಿಲ್ ನಲ್ಲಿ ರಿಲಯನ್ಸ್ ದೇಶದ ಪೆಟ್ರೋಕೆಮಿಕಲ್ಸ್ ಉದ್ಯಮದಲ್ಲಿ 50,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿರುವದಾಗಿ ತಿಳಿಸಿತ್ತು.

ರಿಲಯನ್ಸ್ 2006ರಲ್ಲಿ ಚಿಲ್ಲರೆ ಉದ್ಯಮ ಪ್ರವೇಶಿಸಿದ್ದು ದೇಶಾದ್ಯಂತ 1000 ಮಳಿಗೆಗಳನ್ನು ತೆರೆಯಲು 2.5 ರಿಂದ 3 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದ್ದು ಟೆಲಿಕಾಂ ನ ತರಂಗಾಂತರವನ್ನು ಪಡೆಯಲು 2.8 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ರಿಲಯನ್ಸ್ ನ ಆದಾಯ ಶೇ 1.5ರಷ್ಟು ಕುಸಿಯಲಿದ್ದು ಮುಂದಿನ ವರ್ಷ ಇದು ಶೇ 3 ರಷ್ಟು ಹೆಚ್ಚಾಗಲಿದೆ ಎಂದೂ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+