ಪೊಲೀಸರಿಂದ ಲಾಕಪ್ ಡೆತ್ ಅಲ್ಲಲ್ಲ ಲಾಕಪ್ ಅತ್ಯಾಚಾರ

ಒಶಿವಾರಾ ಪೊಲೀಸರು ಶುಕ್ರವಾರ ರಾತ್ರಿ 7 ಗಂಟೆಯಲ್ಲಿ ದೂರು ನೀಡಲು ಹೋಗಿದ್ದ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆ ಕಾಂಉಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಾಧಿತ ಮಹಿಳೆ ಪೊಲೀಸ್ ಆಯುಕ್ತರಲ್ಲಿ ಅಲವತ್ತುಕೊಂಡಿದ್ದಾಳೆ. ಮಹಿಳೆಯು ಈ ಹಿಂದೆ ಥಾನೆ ಪೊಲೀಸ್ ಠಾಣೆಯಲ್ಲಿ ವಿಲ್ಸನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಪುತ್ರನೊಂದಿಗೆ ವಾಸವಾಗಿರುವ ಈ ಮಹಿಳೆಯು ತನ್ನ ಪತಿರಾಯ, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಡಾನ್ ವಿಲ್ಸನ್ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದಳು. ನನ್ನ ಗಂಡ ಹೊಡೆದು ಬಡಿದು ಮಾಡುತ್ತಿದ್ದಾನೆ. ದೂರು ಸ್ವೀಕರಿಸಿ ಎಂದು ಪೊಲೀಸರಿಗೆ ಹೇಳಿದ್ದಾಳೆ. ಆದರೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಸರಿ ಮಾಧ್ಯಮಕ್ಕೆ ವಿಷಯ ತಲುಪಿಸುತ್ತೇನೆ ಎಂದು ಎಚ್ಚರಿಸಿದ್ದಾಳೆ.
ಆಗ ಕುತಂತ್ರ ಹೂಡಿದ ಪೊಲೀಸರು ಆಕೆಯನ್ನು ಪುಸಲಾಯಿಸಿ, ಲಾಕಪ್ ಗೆ ತಳ್ಳಿದ್ದಾರೆ. ಬಳಿಕ ಇಬ್ಬರು ಪೇದೆಗಳು ಆಕೆಯ ಮೇಲೆ ಅತ್ಯಾಚಾರವೆಸಗಿದರು ಎಂದು ದೂರಿನಲ್ಲಿ ಹೇಳಲಾಗಿದೆ.











Click it and Unblock the Notifications