ಜಪಾನಿನಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಕಟ್ಟೆಚ್ಚರ
ಟೋಕಿಯೊ,
ಜುಲೈ 10: ಸರಿಯಾಗಿ ನಾಲ್ಕು ತಿಂಗಳ ಹಿಂದೆ ಭೀಕರ ಸುನಾಮಿಗೆ ತ್ತುತ್ತಾಗಿದ್ದ ಜಪಾನಿನಲ್ಲಿ ಭಾನುವಾರ ಬೆಳಗ್ಗೆ ಮತ್ತೆ ಭಾರಿ ಭೂಕಂಪವಾಗಿದ್ದು, ಸುನಾಮಿ ಕಟ್ಟೆಚ್ಚರ ಘೋಷಿಸಲಾಗಿದೆ. ತಕ್ಷಣಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. 'ಭೂಕಂಪದ ಪ್ರಮಾಣ 7.3ರಷ್ಟಿತ್ತು. ಇದರಿಂದ ಈಶಾನ್ಯ ಕರಾವಳಿಯಲ್ಲಿ ಸುನಾಮಿ ಬಗ್ಗೆ ಜಾಗ್ರತೆ ಇರಲಿ' ಎಂದು ಜಪಾನಿನ ಹವಾಮಾನ ಇಲಾಖೆ ಘೋಷಿಸಿದೆ. id="toptextpromo">ಫುಕೋಶಿಮಾ
ಅಣು ಸ್ಥಾವರದಲ್ಲಿ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಸುನಾಮಿ ಕಟ್ಟೆಚ್ಚರ ಸ್ಥಳಿಯ ಮಟ್ಟದಲ್ಲಿದೆ. ಆದ್ದರಿಂದ ನೆರೆಯ ಕರಾವಳಿಗಳನ್ನು ಎಚ್ಚರಿಸಿಲ್ಲ. ಜಪಾನಿನ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ 9.57ರಲ್ಲಿ (ಜುಲೈ 10) 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಹವಾಮಾನ ಇಲಾಖೆ ಖಚಿತಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
11ರಂದು 9.1 ತೀವ್ರತೆಯ ಭೂಕಂಪ ತದನಂತರ ಬಲಾಢ್ಯ ಸುನಾಮಿ ಜಪಾನಿಗೆ ಬಡಿದಿತ್ತು. ಇದರಿಂದ ಅಂದಾಜು 20 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಸುನಾಮಿಯಿಂದ ಬೆಂಕಿ ಕಾಣಿಸಿಕೊಂಡು ಫುಕೋಶಿಮಾ ಅಣು ಸ್ಥಾವರ ಸಂಪೂರ್ಣವಾಗಿ ಜ್ವಾಲೆಗಳಲ್ಲಿ ನಂದಿಹೋಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.











Click it and Unblock the Notifications