ಒಬಾಮಾ ದತ್ತು ನೀಡಲು ನಿರ್ಧರಿಸಿದ್ದ ತಂದೆ!
ಬೋಸ್ಟನ್,
ಜುಲೈ 10: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹುಟ್ಟುವ ಮುನ್ನವೇ ಮಗುವನ್ನು ದತ್ತು ನೀಡಲು ಅವರ ತಂದೆ ನಿರ್ಧರಿಸಿದ್ದರು ಎಂಬ ಅಚ್ಚರಿಯ ಅಂಶ ಬಯಲಾಗಿದೆ. ಒಬಾಮಾ ತಂದೆಯ ಜೀವನ ಚರಿತ್ರೆಯೊಂದು ಮುಂದಿನ ವಾರ ಬಿಡುಗಡೆಯಾಗಲಿದ್ದು ಅದರಲ್ಲಿ ಈ ಅಚ್ಚರಿ ದಾಖಲಾಗಿದೆ. id="toptextpromo">ಅದು
1961. ಆಗ ಬರಾಕ್ ಒಬಾಮಾ ಅವರ ತಂದೆ ಯೂನಿವರ್ಸಿಟಿ ಆಫ್ ಹವಾಯ್‌ನಲ್ಲಿ ಓದುತ್ತಿದ್ದರು. ಈ ವೇಳೆಗಾಗಲೇ ಕೀನ್ಯಾ ಮೂಲದ ಯುವತಿಯೊಬ್ಬಳನ್ನು ವರಿಸಿದ್ದ ಒಬಾಮಾರ ತಂದೆ ಹವಾಯ್ ಮೂಲದ ಡನ್‌ಹ್ಯಾಮ್ ಅವರನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದರು. ಡನ್‌ಹ್ಯಾಮ ಗರ್ಭಿಣಿ ಕೂಡಾ ಆಗಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ವೇಳೆ ಒಬಾಮಾ ಅವರ ತಂದೆ ವಲಸೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದರು. ಇಬ್ಬರನ್ನು ಮದುವೆಯಾಗಿರುವ ಕುರಿತು ವಲಸೆ ಅಧಿಕಾರಿಗಳು ಒಬಾಮಾ ತಂದೆಯನ್ನು ವಿಚಾರಣೆ ಗುರಿಪಡಿಸಿದ್ದರು. ಈ ಬಗ್ಗೆ ಉತ್ತರ ನೀಡಿದ್ದ ಒಬಾಮಾ ಅವರ ತಂದೆ ಒಬಾಮಾ ಸೀನಿಯರ್, ತಾನು ಈಗಾಗಲೇ ಕೀನ್ಯಾ ಮೂಲದ ಪತ್ನಿಗೆ ವಿಚ್ಛೇದನ ನೀಡಿದ್ದೇನೆ. ಅಲ್ಲದೆ ಈಗಿನ ಪತ್ನಿಯ ಗರ್ಭದಲ್ಲಿರುವ ಮಗುವನ್ನು ದತ್ತು ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು ಎಂದು ಜೀವನ ಚರಿತ್ರೆಯಲ್ಲಿ ದಾಖಲಿಸಲಾಗಿದೆ.











Click it and Unblock the Notifications