ಬೇನಜೀರ್‌ಗೂ ನನ್ಗೂ ದೈಹಿಕ ಸಂಬಂಧವಿರಲಿಲ್ಲ:ಇಮ್ರಾನ್
ಇಸ್ಲಾಮಾಬಾದ್,
ಜು .9: ಆಕ್ಸಫರ್ಡ್ ವಿವಿಯಲ್ಲಿ (1970 ರಲ್ಲಿ ) ನಾನು ಮತ್ತು ಬೆನಜೀರ್ ಭುಟ್ಟೋ ಓದುತ್ತಿರಬೇಕಾದರೆ ನನಗೂ ಅವರಿಗೆ ಉತ್ತಮ ಸ್ನೇಹತನವಿತ್ತು. ನಮ್ಮಿಬ್ಬರ ಸ್ನೇಹ ದೈಹಿಕ ಸಂಬಂಧದ ವರೆಗೆ ಬಂದಿರಲಿಲ್ಲ. ಆದರೆ ನನ್ನ ತಾಯಿ ನಮ್ಮಿಬ್ಬರ ಮದುವೆಗೆ ಯತ್ನಿಸಿದ್ದು ನಿಜ ಎಂದು ಮಾಜಿ ಕ್ರಿಕೆಟಿಗ ತೆಹ್ರೀಕ್ - ಇ - ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ. id="toptextpromo">ಭಾರತೀಯ
ಬರಹಗಾರ ಫ್ರಾಂಕ್ ಹುಜೂರ್ ಬರೆಯುತ್ತಿರುವ ತನ್ನ ಆತ್ಮಚರಿತ್ರೆಯಲ್ಲಿ ಈ ವಿಷಯ ಸ್ಪಷ್ಟ ಪಡಿಸಿದ ಇಮ್ರಾನ್, ಬೇನಜೀರ್ ಮತ್ತು ನನ್ನ ಸಹೋದರ ಸಂಬಂಧಿಯೊಬ್ಬರ ನಡುವೆ ಪ್ರೇಮಾಂಕುರವಾಗಿತ್ತು . ನಾನೇ ನನ್ನ ಸಂಬಂಧಿಯನ್ನು ಬೇನಜೀರ್ ಗೆ ಪರಿಚಯಿಸಿದ್ದೆ. ಒಂದು ಹಂತದಲ್ಲಿ ಈ ಸಂಬಂಧ ಮದುವೆಯ ಹಂತದವರೆಗೂ ಬಂದಿತ್ತು ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೇನಜೀರ್
ನನ್ನ ಆತ್ಮೀಯ ಸ್ನೇಹಿತೆ. ನಮ್ಮಿಬ್ಬರ ನಡುವೆ ಪರಸ್ಪರ ಮೆಚ್ಚುಗೆ ಇತ್ತು. ಆಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ನನ್ನ ಆತ್ಮೀಯ ಸ್ನೇಹಿತೆಯೊಬ್ಬಳು ಅಧಿಕಾರಕ್ಕಾಗಿ ಕಿತ್ತಾಡುವ ರಾಜಕೀಯ ಪಕ್ಷದ ಕತ್ತಲೆಯಲ್ಲಿ ಕಳೆದು ಹೋದಳೆಂದು ನನಗೆ ಅನಿಸುತ್ತಿತ್ತು ಎಂದು "ಇಮ್ರಾನ್ ವರ್ಸಸ್ ಇಮ್ರಾನ್' ಎನ್ನುವ ಕೃತಿಯಲ್ಲಿ ಇಮ್ರಾನ್ ಖಾನ್ ಹೇಳಿಕೊಂಡಿದ್ದರು.











Click it and Unblock the Notifications