ಸೈನಾ ಮಾತಲ್ಲೂ ಅರ್ಥ ಇದೆ, ಬೆಂಕಿ ಇಲ್ಲದೆ ಹೊಗೆ ಆಡಲ್ಲ!

ನಮ್ಮ ದೇಶದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಲು ಮೆಡಿಸಿನ್ ಬಗ್ಗೆ ಅವರಿಗಿರುವ ಅಜ್ಞಾನವೇ ಕಾರಣ. ಏನು ತೆಗೆದು ಕೊಳ್ಳಬೇಕೆಂದು ಅವರಿಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬರಿಗೂ ವಾಡಾದ ನಿಯಮದ ಅರಿವಿರಬೇಕು. ವೆಬ್‌ಸೈಟ್ ನಲ್ಲಿ ಯಾವ ಮದ್ದನ್ನು ತೆಗೆದುಕೊಳ್ಳಬೇಕು ಹಾಗೂ ಬೇಡ ಎನ್ನುವ ಕುರಿತು ವಿವರ ನೀಡಲಾಗಿದೆ. [ವಿಡಿಯೋ ನೋಡಿ]
ಅಜ್ಞಾನವೇ ಕಾರಣವೇ?:ಹೆಚ್ಚಿನ ಅಥ್ಲೆಟ್‌ಗಳು ಹಾಗೂ ವೈಟ್ ಲಿಫ್ಟರ್ ಗಳು ಸುಶಿಕ್ಷಿತರು ಆಗಿರುವುದಿಲ್ಲ. ಅವರು ಕೋಚ್ ಹೇಳಿದ ಔಷಧವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಇದರಲ್ಲಿ ಕೋಚ್ ಜವಾಬ್ದಾರಿಯೂ ಸೇರಿದೆ. ನನಗೆ ಸಣ್ಣ ಜ್ವರ ದ ಉಳಿಗೆ ನುಂಗಬೇಕಾದರೂ ವೈದ್ಯರ ಸಲಹೆ ಮೇರೆಗೆ ಗುಳಿಗೆಯಲ್ಲಿರುವ ಪದಾರ್ಥದ ಬಗ್ಗೆ ವಿವರ ಪಡೆದು ನಂತರ ಸೇವಿಸುವೆ ಎಂದು ಸೈನಾ ಹೇಳಿದ್ದಾರೆ.
ಆಕೆ ಹೇಳುವುದೇನೋ ಸರಿ ಆದರೆ, ವಾಡಾ ವೆಬ್ ಸೈಟ್ ನಲ್ಲಿ ನಿಷೇಧಿತ ಡ್ರಗ್ಸ್ ಪಟ್ಟಿ ಹೈದರಾಬಾದಿನಿಂದ ಬೆಂಗಳೂರು ತನಕ ಇದೆ ಅಷ್ಟನ್ನೂ ಯಾರು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಚಿನ್ನದ ಪದಕ ಗೆಲ್ಲುವ ಗುರಿ ಇಟ್ಟುಕೊಳ್ಳುವ ಕ್ರೀಡಾಪಟುಗಳ ಆಹಾರ, ಔಷಧಿ ವಿಷಯದ ಹೊಣೆ ತರಬೇತುದಾರರದ್ದೇ ಅಲ್ಲವೇ?












Click it and Unblock the Notifications