ಬಿಬಿಎಂಪಿಗೆ ವಾಟರ್ ಬಿಲ್ ಕಟ್ಟುವ ಜಾಯಮಾನವೇ ಇಲ್ಲ

ಇಷ್ಟೇ ಅಲ್ಲ ಇರಿ. ಸಾರ್ವಜನಿಕವಾಗಿ ಬಳಕೆಯಾಗುತ್ತಿರುವ ಕೊಳಾಯಿಗಳ ಬಾಬತ್ತಿನಲ್ಲಿ (2004ರ ಜನವರಿವರೆಗಿನ ಲೆಕ್ಕ) BBMP 149 ಕೋಟಿ ರು. ತೆರಬೇಕಾಗಿದೆ. ಇನ್ನೂ ತಮಾಷಿ ಗೊತ್ತಾ! ಬೇರೆ ಯಾರೇ ಆಗಲಿ ಸಾಲ ಉಳಿಸಿಕೊಂಡರೆ BWSSB ಶೇ. 18ರಷ್ಟು ಬಡ್ಡಿ ಜಡಿಯುತ್ತದೆ. ಪಾಪ ಅದೇ BBMP ಈ ಪಾಟಿ ಬಾಲಿ ಉಳಿಸಿಕೊಂಡಿದ್ದರೂ ಆ ಮೊತ್ತದ ಮೇಲೆ ಬಡ್ಡಿಯನ್ನೇ ಹಾಕುವುದಿಲ್ಲ. ರಾಜ್ಯ ಸರಕಾರದ ಇತರೆ ಕೆಲವು ಇಲಾಖೆಗಳು 10 ಕೋಟಿ ರು. ಕಟ್ಟಬೇಕಾಗಿವೆ.
BDA ಸಹ ತಾನೇನು BBMPಗಿಂತ ಕಮ್ಮಿ ಇಲ್ಲ ಎನ್ನುತ್ತಿದೆ. ಸುಮಾರು 10 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಕೇಂಧ್ರ ಸರಕಾರದ ರೈಲ್ವೆ, ಆದಾಯ ತೆರಿಗೆ ಇಲಾಖೆ, ಕೇಂದ್ರೀಯ ಸದನ, 2 ಕೋಟಿ ರು. ಬಾಕಿ ನೀಡಬೇಕಿವೆ. ಇನ್ನು ಭಾರತೀಯ ಸೇನೆ ಶಿಸ್ತಾಗಿ 1 ಕೋಟಿ ರು.ಗಳನ್ನು BWSSBಗೆ ಬಾಕಿ ಪಾವತಿಸಬೇಕಿದೆ.
ಹಾಗಾದರೆ BWSSBಗೆ ಬಿಲ್ ಕಟ್ಟುತ್ತಿರುವವರು ಯಾರು ಎಂದು ಕೇಳಿದಿರಾ? ಇನ್ಯಾರು ಸ್ವಾಮಿ. ಇದ್ದೀವಲ್ಲ, ನಾವು ನೀವು ಸಾಮಾನ್ಯ ಜನ ಅನಿಸಿಕೊಂಡವರು ನಾವೇ ತಿಂಗ್ಳಾ ತಿಂಗ್ಳಾ ನಿಯತ್ತಾಗಿ ಬಿಲ್ ಪಾವತಿಸುತ್ತಿರುವುದು. ಬಿಡಿ ದೊಡ್ಡೋರ ವಿಷ್ಯಾ ನಮಗ್ಯಾಕೆ, ನಾನೂ ಈ ತಿಂಗಳ ಬಿಲ್ ಕಟ್ಟಿ ಬರಬೇಕು, ಹೊರಟೆ.












Click it and Unblock the Notifications