ಅಮೆರಿಕದ ಸ್ವಾತಂತ್ರ್ಯ ದಿನದಂದೇ ಒಬಾಮ ಗುಂಡಿಗೆ ಬಲಿ!
ವಾಷಿಂಗ್ಟನ್,
ಜುಲೈ 5: ಅಮೆರಿಕಕ್ಕೆ ಜುಲೈ 4ರಂದು ತನ್ನ 235ನೇ ಸ್ವಾತಂತ್ರ್ಯೋತ್ಸವ. 'ಆದರೆ ಈಗಷ್ಟೇ ಬಂದ ಸುದ್ದಿಯೊಂದಿದೆ ಕೇಳಿ. ಅಮೆರಿಕದ ರಾಷ್ಟ್ರೀಯ ದಿನವಾದ ಜುಲೈ 4ರಂದು ಅಧ್ಯಕ್ಷ ಬರಾಕ್ ಒಬಾಮ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೊಂದು ದುರ್ದಿನ' - ಹೀಗೆಂದು ದೇಶದ ಅತ್ಯಂತ ಜನಪ್ರಿಯ ಸುದ್ದಿ ಸಂಸ್ಥೆ 'ಫಾಕ್ಸ್ ನ್ಯೂಸ್' ಫೇಕ್ ನ್ಯೂಸ್ ಅನ್ನು ಪ್ರಕಟಿಸುವ ಅಚಾತುರ್ಯ ಎಸಗಿದೆ. id="toptextpromo">'ಫಾಕ್ಸ್
ನ್ಯೂಸ್'ಗೆ ಸೇರಿದ ಟ್ವಿಟರ್ ಗೆ ಕನ್ನ ಹಾಕಿದವರು (ಹ್ಯಾಕ್) ಇಂತಹದ್ದೊಂದು ಕುಚೋದ್ಯ ಮಾಡಿದ್ದಾರೆ. 'ಈ ಕೃತ್ಯ ಎಸಗಿದ್ದು ತಾವು ಎಂದು ದಿ ಸ್ಕ್ರಿಪ್ಟ್ ಕಿಡ್ಡೀಸ್ ಎಂಬ ಗುಂಪು ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ' ಎಂದು ಬಿಬಿಸಿ ಸುದ್ದಿ ಸಂಸ್ಥೆ ಪ್ರಕಟಿಸಿದೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಅಮೆರಿಕದಾದ್ಯಂತ ಅತ್ಯುತ್ತಮ ಜಾಲ ಹೊಂದಿರುವ 'ಫಾಕ್ಸ್ ನ್ಯೂಸ್' ಯಾವುದೇ ಸುದ್ದಿಯನ್ನು ಮರು ಪರಿಶೀಲಿಸಿಯೇ ನೀಡುತ್ತಿದ್ದು, ಮಾಧ್ಯಮ ಗುಂಪುಗಳಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿಯೇ ಸಿಎನ್‌ಎನ್ ನಂತಹ ಸುದ್ದಿವಾಹಿನಿಗಳನ್ನೂ 'ಫಾಕ್ಸ್ ನ್ಯೂಸ್' ಹಿಂದಿಕ್ಕಿದೆ. ಇಂತಹ ಸುದ್ದಿ ಸಂಸ್ಥೆಯಲ್ಲಿಯೇ ಈ ತೆರನಾದ ಪ್ರಮಾದ ನಡೆದಿರುವ ಬಗ್ಗೆ ಇದೀಗ ಅಮೆರಿಕದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದಂತಾಗಿದೆ.











Click it and Unblock the Notifications