ಜನ ಲೋಕಪಾಲ ವ್ಯಾಪ್ತಿಗೆ ಪ್ರಧಾನಿ: ಓಕೆ ಎಂದ ಅಡ್ವಾಣಿ

advani
ನವದೆಹಲಿ ಜುಲೈ 5: ಹಿರಿಯ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿ ಒಳಪಡಿಸಬೇಕು ಎಂದು ಹೇಳಿದ್ದಾರೆ. ಎನ್‌ಡಿಎ 1998 ಮತ್ತು 2001ರಲ್ಲಿ ಸಿದ್ಧಪಡಿಸಿದ ಕರಡು ಈ ಬಗೆಗೆ ಸ್ಪಷ್ಟವಾದ ನಿಲುವು ಹೊಂದಿದೆ ಎಂದಿದ್ದಾರೆ.

ಇದರೊಂದಿಗೆ ಪ್ರಧಾನಿ ಕಚೇರಿಯನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ತರಬೇಕೇ, ಬೇಡವೇ? ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ದೂರವೇ ಉಳಿದಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿ ಕೊನೆಗೂ ಮೌನ ಮುರಿದಿದೆ. ಮಸೂದೆ ವ್ಯಾಪ್ತಿಗೆ ಪ್ರಧಾನ ಮಂತ್ರಿ ಕಚೇರಿ ಒಳಪಡಿಸಬೇಕೆಂಬ ನಿಲುವು ವ್ಯಕ್ತಪಡಿಸಿದೆ.

ಮಸೂದೆ ಕುರಿತು ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಈ ಪ್ರಮುಖ ವಿವಾದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಮೌನ ತಾಳಿತ್ತು. ಅಡ್ವಾಣಿ ಈಚಿನ ತಮ್ಮ 'ಬ್ಲಾಗ್'ನಲ್ಲಿ ತಾವು ಯಾವಾಗಲೂ ಪ್ರಧಾನಿ ಕಚೇರಿಯನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕು ಎಂದು ಪ್ರತಿಪಾದಿಸುತ್ತಿರುವುದಾಗಿ ಹೇಳಿದ್ದಾರೆ.

ವಾಜಪೇಯಿ ಪ್ರಧಾನಿಯಾಗಿದ್ದಾಗ ಮಂಡಿಸಿದ ಲೋಕಪಾಲ ಮಸೂದೆ ಪ್ರಧಾನಿ ಕಚೇರಿ ಒಳಗೊಂಡಿತ್ತು. ಪ್ರಧಾನಿ ಮಸೂದೆ ವ್ಯಾಪ್ತಿಯಿಂದ ಹೊರಗಿರಬಾರದು ಎಂದು ಅಟಲ್‌ಜಿ ನಂಬಿದ್ದರು ಎಂದು ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+