ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡಾಲ್ ಸೋಲಿಸಿದ ಜೋಕೋವಿಕ್ ವಿಂಬಲ್ಡನ್ ಚಾಂಪಿಯನ್

By Prasad
|
Google Oneindia Kannada News

ವಿಂಬಲ್ಡನ್, ಜು. 03 : ಡಿಫೆಂಡಿಂಗ್ ಚಾಂಪಿಯನ್ ರಾಫೆಲ್ ನಡಾಲ್ ಅವರಿಗೆ ಆಘಾತಕಾರಿ ಸೋಲುಣಿಸಿರುವ ಸೆರ್ಬಿಯಾದ 24 ವರ್ಷದ ನೋವಾಕ್ ಜೋಕೋವಿಕ್ ಮೊದಲಬಾರಿಗೆ ವಿಂಬಲ್ಡನ್ ಚಾಂಪಿಯನ್ ಶಿಪ್ ಕಿರೀಟವನ್ನು ಧರಿಸಿದ್ದಾರೆ.

ಪೆಂಟರುಗಳ ಫೆವರಿಟ್ ಆಗಿದ್ದ ರಾಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್ ಗಳಲ್ಲಿ 6-4 6-1 1-6 6-3 ಅಂತರದಿಂದ ಸೋಲಿಸಿ ಹುಲ್ಲಿನಂಕಣದ ಹೊಸ ರಾಜಕುಮಾರನಾಗಿ ಮೆರೆದಿದ್ದಾರೆ ಜೋಕೋವಿಕ್. ಮೂರನೇ ಸೆಟ್ ಗೆದ್ದು ನಾಲ್ಕನೇ ಸೆಟ್ ನಲ್ಲಿ ತೀವ್ರ ಪೈಪೋಟಿ ನೀಡಿದರೂ ಜೋಕೋವಿಕ್ ರನ್ನು ತಡೆಯಲು 'ರಾಫಾ'ಗೆ ಸಾಧ್ಯವಾಗಲಿಲ್ಲ.

ಮೊದಲೆರಡು ಸೆಟ್ ಗಳನ್ನು ಸರಾಗವಾಗಿ ಗೆದ್ದುಕೊಂಡ ಜೋಕೋವಿಕ್ ರಿಗೆ ಮೂರನೇ ಸೆಟ್ ನಲ್ಲಿ ನಡಾಲ್ ತಮ್ಮ ತಾಕತ್ ಏನೆಂಬುದನ್ನು ತೋರಿಸಿದರು. ನಾಲ್ಕನೇ ಗೇಮ್ ನಲ್ಲಿ ನಡಾಲ್ ರಿಂದ ಜೋಕೋವಿಕ್ ಸಾಕಷ್ಟು ಪೈಪೋಟಿ ಎದುರಿಸಿದರು. ಆದರೆ, ಕೊನೆಯಲ್ಲಿ ಜೋಕೋವಿಕ್ ಕೈ ಮೇಲಾಯಿತು, ಹನ್ನೊಂದನೇ ಗ್ರಾಂಡ್ ಸ್ಲ್ಯಾಮ್ ಗೆಲ್ಲುವ ನಡಾಲ್ ಕನಸು ಭಗ್ನವಾಯಿತು.

ವಿಂಬಲ್ಡನ್ ಪ್ರಶಸ್ತಿ ಸೇರಿದಂತೆ ಜೋಕೋವಿಕ್ ಅವರು ಮೂರು ಗ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದಾರೆ. ಈ ವರ್ಷ ಮತ್ತು 2008ರಲ್ಲಿ ನೋವಾಕ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೂಡ ಆಗಿದ್ದಾರೆ. ಫೈನಲ್ ಗೆ ಮುಂಚೆಯೇ ನಂ.1 ಸ್ಥಾನಕ್ಕೇರಿರುವ ಜೋಕೋವಿಕ್ ಅವರು ಸೋಮವಾರ ಅಧಿಕೃತವಾಗಿ ಆ ಪಟ್ಟಕ್ಕೇರಲಿದ್ದಾರೆ.

ಪ್ರಸ್ತುತ ವರ್ಷ 48 ಪಂದ್ಯಗಳಲ್ಲಿ 47 ಪಂದ್ಯಗಳನ್ನು ಗೆದ್ದಿರುವ ಜೋಕೋವಿಕ್, ಇದೇ ವರ್ಷ 4 ಬಾರಿ ನಡಾಲ್ ಅವರನ್ನು ಸೋಲಿಸಿದ್ದಾರೆ. ಇದೇ ಹೆದರಿಕೆ ನಡಾಲ್ ಅವರನ್ನು ಕಾಡುತ್ತಿತ್ತು. ನೋವಾಕ್ ಬದಲು ರೋಜರ್ ಫೈನಲ್ ನಲ್ಲಿ ಎದುರಾಗುವುದನ್ನು ಇಷ್ಟಪಡುತ್ತೇನೆ ಎಂದು ನಡಾಲ್ ಹೇಳಿದ್ದರು. 2011ರಲ್ಲಿ ಸತತ ನಾಲ್ಕು ಬಾರಿ ಸೋತಿರುವ ಅವರಿಗೆ ಮತ್ತೆ ಸೋಲುತ್ತೇನೆಂಬ ಭಯ ಕಾಡುತ್ತಿತ್ತೋ ಏನೋ?

English summary
Sebian Novak Djokovic is the new champion of Wimbledon 2011. Djokovic defeated defending champion Rafael Nadal in the final in 4 sets. Djokovic will become world No.1 tennis player on Monday, July 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X