ಜರ್ಮನಿ, ಬೋಸ್ನಿಯಾದಲ್ಲೂ ಕನ್ನಡ ಅಧ್ಯಯನ ಪೀಠ

ಜರ್ಮನಿಯ ಬಹೋರಿಯಾದ ಊರ್ಜಬರ್ಜ್, ಹೇಡನ್ ಬರ್ಗ್, ಮ್ಯೂನಿಚ್ ಹಾಗೂ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಈ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಒಟ್ಟಾರೆ ಕರ್ನಾಟಕದಿಂದ ಹೊರಗಡೆ ಸುಮಾರು 7 ಕನ್ನಡ ಅಧ್ಯಯನ ಕೇಂದ್ರಗಳನ್ನು ಬೆಳೆಸಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಉದ್ಯೋಗನೀತಿ ಜಾರಿಗೊಳ್ಳಬೇಕು. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕು. ಆಡಳಿತದಲ್ಲಿ ಕನ್ನಡ ಬಳಕೆ ಹೆಚ್ಚಬೇಕು. ಶಾಸ್ತ್ರೀಯ ಭಾಷೆ ಅನುದಾನ ಹೆಚ್ಚಬೇಕು. ಈ ಬಗ್ಗೆ ಚರ್ಚಿಸಲು ನಿಯೋಗವನ್ನು ಕರೆದುಕೊಂಡು ಕೇಂದ್ರ ಸರ್ಕಾರ ಮೊರೆ ಇಡುವುದಾಗಿ ಮುಖ್ಯಮಂತ್ರಿ ಚಂದ್ರು ಹೇಳಿದರು.












Click it and Unblock the Notifications