ಫೇಸ್ ಬುಕ್ ನಲ್ಲಿ ದೆಹಲಿ ರೈಲು ಓಡುತ್ತಿದೆ ನೋಡಿದಿರಾ?
ನವದೆಹಲಿ
ಜು 3 : ಭಾರತೀಯ ರೈಲ್ವೇ ಅಧಿಕೃತವಾಗಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಗೆ ಎಂಟ್ರಿ ಪಡೆದಿದೆ. ಉತ್ತರ ರೈಲ್ವೇ ವಿಭಾಗದ ನವದೆಹಲಿ ಸ್ಟೇಷನ್ ನ ರೈಲುಗಳ ಪ್ರಸಕ್ತ ಪರಿಸ್ಥಿತಿಗಳ ವಿವರಣೆ ಜೊತೆಗೆ ನಿರ್ದಿಷ್ಟ ಪ್ರದೇಶಗಳಿಗೆ ರೈಲುಗಳ ಆಗಮನ ಮತ್ತು ನಿರ್ಗಮನಗಳ ವಿವರ ಫೇಸ್ ಬುಕ್ ನಲ್ಲಿ ಲಭ್ಯವಾಗಲಿದೆ. id="toptextpromo">ಫೇಸ್
ಬುಕ್ ಮೂಲಕ ರೈಲ್ವೇ ನಿಲ್ದಾ ಣ ಗಳ, ರೈಲ್ವೇ ನಿಗಮದ ಆಗುಹೋಗುಗಳು ಮತ್ತು ರೈಲು ಸೇವೆಗಳ ಬಗೆಗಿನ ಸಾರ್ವಜನಿಕರಿಗೆ ತಕ್ಷಣದ ಮಾಹಿತಿ ಒದಗಿಸಲಾಗುವುದು. ನವದೆಹಲಿ, ಹಳೆದೆಹಲಿ ಮತ್ತು ನಿಜಾಮುದ್ದೀನ್ ಈ ಮೂರು ಪ್ರಮುಖ ರೈಲ್ವೇ ನಿಲ್ದಾಣಗಳಿಂದ ಓಡುತ್ತಿರುವ ರೈಲುಗಳ ವೇಳಾಪಟ್ಟಿ ಮತ್ತು ಅದರ ಫ್ಲಾಟ್ ಫಾರ್ಮ್ ಸಂಖ್ಯೆಗಳ ವಿವರಗಳನ್ನು ಕೂಡ ಪ್ರಯಾಣಿಕರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ರೈಲ್ವೇ ಪ್ರದಾನ ಕಾರ್ಯದರ್ಶಿ ಎಸ್ ಕೆ ಬುಧಗಳ ಕೋಟಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೆಹಲಿ
ರೈಲ್ವೇ ವಿಭಾಗದ ಫೇಸ್ ಬುಕ್ ಖಾತೆ ಏಪ್ರಿಲ್ ನಲ್ಲಿ ಆರಂಭವಾಗಿದ್ದು. ದಿನೇದಿನೇ ಜನಪ್ರಿಯತೆ ಗಳಿಸುತ್ತಿದೆ. ಇದೇ ಮಾದರಿಯನ್ನು ಇತರೆ ವಿಭಾಗಗಳಿಗೂ ವಿಸ್ತರಿಸಲಾಗುವುದು. ಎಸ್ಎಂಎಸ್ ಮೂಲಕ ಸಾರ್ವಜನಿಕರು ದೂರು ದಾಖಲಿಸುವ ವ್ಯವಸ್ಥೆಯನ್ನು ಕೂಡಾ ಇನ್ನಷ್ಟು ಬಲಗೊಳಿಸಲಾಗುವುದು ಎಂದು ಕೋಟಿ ಹೇಳಿದ್ದಾರೆ.











Click it and Unblock the Notifications