ಹೊಸ ವೇಳಾಪಟ್ಟಿ, ನಿಮ್ಮೂರ ರೈಲು ಸಮಯ ಬದಲಾಗಿದೆ

South Western Railway
ಬೆಂಗಳೂರು, ಜೂನ್ 2: ನೈಋತ್ಯ ರೈಲ್ವೆ ವಲಯ(ಎಸ್ ಡಬ್ಲ್ಯುಆರ್) ಈ ತಿಂಗಳ ಆರಂಭದಿಂದ ಅನ್ವಯವಾಗುವಂತೆ ನೂತನ ವೇಳಾಪಟ್ಟಿ ಪ್ರಕಟಿಸಿದೆ. ಕೆಲವು ರೈಲುಗಳ ಸಂಚಾರ ವಿಸ್ತಾರವಾಗಿದೆ. ಮೈಸೂರಿಗೆ ಎರಡು ಹೊಸ ರೈಲು ಸಂಚಾರವು ಆರಂಭವಾಗಿದೆ ಎಂಬುದು ಸಿಹಿಸುದ್ದಿ. ಬೆಂಗಳೂರು-ಮೈಸೂರು-ಬೆಂಗಳೂರು ರಾಜ್ಯ ರಾಣಿ ಎಕ್ಸ್ ಪ್ರೆಸ್ ಮತ್ತು ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ ಇವೆರಡು ಹೊಸ ರೈಲುಗಳಾಗಿವೆ.

ಟ್ರೈನ್ ನಂಬರ್ 16206 ಮೈಸೂರು ಶಿವಮೊಗ್ಗ ಟೌನ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ಮುಂಜಾನೆ ಆರಕ್ಕೆ ಮೈಸೂರಿನ್ನು ಬಿಟ್ಟರೆ (ಎಕ್ಸ್ ಟೆನ್ಷನ್) ಮಧ್ಯಾಹ್ನ 2 15ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ. ಅನಂತಪುರ ಮತ್ತು ಸಾಗರದಲ್ಲಿ ಹಾಲ್ಟ್ ಆಗಿ ಈ ರೈಲು ಸಾಗಲಿದೆ. ತಾಳಗುಪ್ಪದಿಂದ ಮತ್ತೊಂದು ರೈಲು ಮಧ್ಯಾಹ್ನ 2.30ಕ್ಕೆ ಹೊರಟ ರೈಲು ರಾತ್ರಿ 11.50ಕ್ಕೆ ಮೈಸೂರು ತಲುಪಲಿದೆ.

ವಾರಕ್ಕೆ ಮೂರುದಿನ ಹೋಗುವ ಯಶವಂತಪುರ ಮಂಗಳೂರು ಇಂಟರ್ ಸಿಟಿ ರೈಲು ಕಾರವಾರ ತನಕ ಹೋಗಲಿದೆ. ಇದರ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸೋಮವಾರ, ಬುಧವಾರ, ಶುಕ್ರವಾರ ಯಶವಂತಪುರದಿಂದ ಮುಂಜಾನೆ 6 ಗಂಟೆಗೆ ಹೊರಟು ಕಾರವಾರವನ್ನು ರಾತ್ರಿ 11 ಗಂಟೆಗೆ ತಲುಪಲಿದೆ. ಅದೇ ದಿನಗಳಲ್ಲಿ ಕಾರವಾರದಿಂದ ಮುಂಜಾನೆ 5.30ಕ್ಕೆ ಹೊರಟ ರೈಲು, ರಾತ್ರಿ 10.25 ಗಂಟೆಗೆ ಯಶವಂತಪುರ ತಲುಪಲಿದೆ.

ಹೊಸದಾಗಿ ವಿಸ್ತರಿಸಿರುವುದರಿಂದ ಮಂಗಳೂರು ಜಂಕ್ಷನ್, ಉಡುಪಿ, ಮೂಕಾಂಬಿಕಾ ರಸ್ತೆ, ಭಟ್ಕಳ, ಗೊಕಾರ್ಣ ಮತ್ತು ಕುಮಟಾ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಟ್ರೈನ್ ನಂಬರ್ 19406 ಅಹಮಾದಬಾದ್-ಯಶವಂತಪುರ ವೀಕ್ಲಿ ಎಕ್ಸ್ ಪ್ರೆಸ್ ಅಹಮಾದಬಾದಿನಿಂದ ಶನಿವಾರ ಪೂರ್ವಾಹ್ನ 9.40ಕ್ಕೆ ಹೊರಡಲಿದೆ. ಶನಿವಾರ ಸಂಜೆ 6.40 ಗಂಟೆಗೆ ತಲುಪಲಿದೆ. ಸೋಮವಾರ ಟ್ರೈನ್ ನಂಬರ್ 19405 ಯಶವಂತಪುರದಿಂದ ಹೊರಟು ಸಂಜೆ 7.20 ನಿಮಿಷಕ್ಕೆ ಅಹಮಾದಬಾದ್ ತಲುಪಲಿದೆ.

ಚೆನ್ನೈ-ಶಿರಡಿ-ಚೆನ್ನೈ ಎಕ್ಸ್ ಪ್ರೆಸ್ ಚೆನ್ನೈನಿಂದ ಬುಧವಾರ ಪೂರ್ವಾಹ್ನ 10.10ಕ್ಕೆ ಹೊರಟು ಗುರುವಾರ ಪೂರ್ವಾಹ್ನ 11.30ಕ್ಕೆ ತಲುಪಲಿದೆ. ಶುಕ್ರವಾರ ಮುಂಜಾನೆ 8.25ಕ್ಕೆ ಶಿರಡಿಯಿಂದ ಹೊರಟು ಶನಿವಾರ ಪೂರ್ವಾಹ್ನ 9.40ಕ್ಕೆ ಚೆನ್ನೈ ತಲುಪಲಿದೆ.

ಬೆಂಗಳೂರು ಎರ್ನಕುಲಂ ವಾರದ ರೈಲು ಭಾನುವಾರ ಮುಂಜಾನೆ 5 ಗಂಟೆಗೆ ಎರ್ನಕುಲಂ ನಿಂದ ಹೊರಟು ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನ್ನು ಸೋಮವಾರ ಪೂರ್ವಾಹ್ನ 4.20 ಗಂಟೆಗೆ ತಲುಪಲಿದೆ. ಮತ್ತೊಂದು ಟ್ರೈನ್ ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನಿಂದ ಸೋಮವಾರ ಸಂಜೆ 5.15 ಗಂಟೆಗೆ ಹೊರಟು ಎರ್ನುಕುಲಂಗೆ ಮಂಗಳವಾರ ಮುಂಜಾನೆ 4.20ಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+