ಗಿನ್ನಿಸ್ ದಾಖಲೆ ಸೇರಿದ ಬಳ್ಳಾರಿಯ ಪ್ರವಳಿಕಾ

ಸಾಧನೆಯ ಶಿಖಿರಗಳನ್ನೇರುತ್ತಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆಗಳನ್ನಿರಿಸುತ್ತಿರುವ ಪ್ರವಳಿಕಾಗೆ 'ನಾಟ್ಯಮಯೂರಿ, ಕಲಾಶ್ರೀ, ಭರಣಿಶ್ರೀ, ದಿ. ಪುಟ್ಟರಾಜಗವಾಯಿಗಳ ಬಾಲಪ್ರತಿಭೆ" ಪ್ರಶಸ್ತಿಗಳು ಬಂದಿವೆ. ವಿವಿಧ ಸಂಘಟನೆಗಳು ಗೌರವಿಸಿ ಅಭಿನಂದಿಸಿವೆ.
2010ರ ಡಿಸೆಂಬರ್ 26ರಂದು ಹೈದ್ರಾಬಾದ್‌ನ ಗಚಿಭೌಲಿ ಕ್ರೀಡಾಂಗಣದಲ್ಲಿ ನಡೆದ ಎರಡನೆಯ ಅಂತಾರಾಷ್ಟ್ರೀಯ ಕೂಚಿಪುಡಿ ನೃತ್ಯ ಸ್ಪರ್ಧೆಯಲ್ಲಿ ಸಿಲಿಕಾನ್ ಆಂಧ್ರದ 2850 ಸದಸ್ಯರ ತಂಡದಲ್ಲಿ ಅವಕಾಶ ಪಡೆದು, 12 ನಿಮಿಷಗಳ ನೃತ್ಯ ಪ್ರದರ್ಶನ ಮಾಡಿ ತಂಡವಾಗಿ ಗಿನ್ನಿಸ್ ದಾಖಲೆ ಸೇರಿದ್ದಾಳೆ.
ತಂಡ ಗಿನ್ನಿಸ್ ದಾಖಲೆ ಸೇರಿದ ಕಾರಣ ತಂಡದ ಸದಸ್ಯೆ ಆಗಿರುವ ಪ್ರವಳಿಕಾ ಕೂಡ ಗಿನ್ನಿಸ್ ದಾಖಲೆ ಸೇರಿದ ಖುಷಿಯಲ್ಲಿದ್ದಾಳೆ. ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರ ನೀಡಿದ ಸಂಸ್ಥೆ ತಂಡದ ಪ್ರತಿಯೊಬ್ಬರಿಗೂ ವೈಯಕ್ತಿಕ ಪ್ರಮಾಣಪತ್ರ ನೀಡಿದೆ.












Click it and Unblock the Notifications