ಯಲಹಂಕದಲ್ಲಿ ಮಗುವನ್ನು ಕಿತ್ತುತಿಂದ ಬೀದಿ ನಾಯಿಗಳು

Stray dogs kill child in Bangalore
ಬೆಂಗಳೂರು, ಜು. 1 : ಮಲಗಿ ನಿದ್ರಿಸುತ್ತಿದ್ದ ಎರಡೂವರೆ ವರ್ಷದ ಮಗುವೊಂದನ್ನು ಬೀದಿ ನಾಯಿಗಳು ಹಾಡುಹಗಲೇ ಕಿತ್ತಾಡಿ ತಿಂದ ಹೃದಯ ವಿದ್ರಾವಕ ಘಟನೆ ನಗರದ ಯಲಹಂಕದಲ್ಲಿ ಶುಕ್ರವಾರ ನಡೆದಿದೆ.

ಮಗುವಿನ ತಾಯಿ ಗರ್ಭಿಣಿಯಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ತಂದೆ ಬಿಹಾರದ ಮೂಲದವನಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಆತ ಆಸ್ಪತ್ರೆಯ ಕೆಳಮಹಡಿಯಲ್ಲಿ ಮಲಗುತ್ತಿದ್ದ. ಮಗುವನ್ನು ಅಲ್ಲೇ ಮಲಗಿಸಿ ಹೊರಗೆ ತೆರಳಿದಾಗ ಈ ಘಟನೆ ಸಂಭವಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿದ್ದಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮಗುವಿನ ದುಃಖತಪ್ತ ಪಾಲಕರನ್ನು ಸಂತೈಸಿದರು. ಕುಟುಂಬಕ್ಕೆ ಬೇರೆ ಕಡೆ ವಸತಿ ಕಲ್ಪಿಸಿಕೊಡಲು ಆದೇಶಿಸಿದರು. ಮೇಯರ್ ಶಾರದಮ್ಮ ಅವರೊಂದಿಗೆ ಮಾತನಾಡಿ ಪರಿಹಾರದ ಹಣ ನಿಗದಿಪಡಿಸುವುದಾಗಿ ಹೇಳಿದರು.

ಮಗುವನ್ನು ಕಳೆದುಕೊಂಡ ಕುಟುಂಬಕ್ಕೆ ಬೇರೆ ವಸತಿ ಮತ್ತು ಪರಿಹಾರ ನೀಡುವುದೇನೋ ಸರಿ. ಆದರೆ, ಬಿಬಿಎಂಪಿಯವರು ಈ ರಕ್ಕಸ ಬೀದಿ ನಾಯಿಗಳನ್ನು ಹಿಡಿದು ಮಟ್ಟ ಹಾಕುವುದು ಯಾವಾಗ? ಇಂತಹ ಇನ್ನೊಂದು ಘಟನೆ ಸಂಭವಿಸಿದರೂ ಇವರು ಕ್ರಮ ತೆಗೆದುಕೊಳ್ಳುತ್ತಾರೆಂಬುದು ಏನು ಖಾತ್ರಿ? ಕಳೆದ ಜನವರಿಯಲ್ಲಿ ಬಾಗಲೂರಿನಲ್ಲಿ ಇಂಥದೇ ಘಟನೆ ನಡೆದಿತ್ತು. ಇಟ್ಟಿಗೆ ನಿರ್ಮಾಣ ಮಾಡುವ ಜಾಗದಲ್ಲಿ ಎರಡು ವರ್ಷದ ಮಗುವನ್ನು ಬೀದಿ ನಾಯಿಗಳು ತಿಂದಿದ್ದವು.

ಬೀದಿ ನಾಯಿಗಳಿದ್ದರೆ ಫೋನ್ ಮಾಡಿ :
ನಿಮ್ಮ ಏರಿಯಾದಲ್ಲೂ ಬೀದಿ ನಾಯಿ ಹಾವಳಿ ವಿಪರೀತವಾಗಿದ್ದರೆ ನಾಯಿಗಳನ್ನು ಆರೈಕೆ ಮಾಡುತ್ತಿರುವ ಸಂಸ್ಥೆ CUPAಗೆ 2294 7300 ಅಥವಾ 2204 7307 ಫೋನ್ ಮಾಡಿ. ಅವರು ಬಂದು ನಾಯಿಗಳನ್ನು ಒಯ್ಯುತ್ತಾರೆ. ಬಿಬಿಎಂಪಿಗೆ ದೂರು ನೀಡಬೇಕಿದ್ದರೆ ಈ ತಾಣದಲ್ಲಿ ದಾಖಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+