ಸಾಲದ ಸುಳಿಯಲ್ಲಿ ದೇಶವನ್ನೇ ಹರಾಜಿಗಿಟ್ಟ ಗ್ರೀಸ್ !

ಗ್ರೀಸ್‌ನ ಮೇಲೆ ಒಟ್ಟು 15,700 ಕೋಟಿ ಡಾಲರ್ ಸಾಲದ ಹೊರೆಯಿದೆ. ಗ್ರೀಸ್ ಸರ್ಕಾರಕ್ಕೆ ಸೇರಿದ ಆಸ್ತಿಯನ್ನು ಕೊಳ್ಳುವ ಸಾಮರ್ಥ್ಯವಿರುವ ಖಾಸಗಿ ಸಂಸ್ಥೆಗಳು ಗ್ರೀಸ್ ಅಥವಾ ಯುರೋಪ್ ಒಕ್ಕೂಟದಲ್ಲಿ ತುಂಬಾ ಕಡಿಮೆ ಇರುವುದರಿಂದ ಅದು, ಚೀನಾ ಸೇರಿದಂತೆ ಇತರ ವಿದೇಶಿ ಬಂಡವಾಳ ಹೂಡಿಕೆದಾರರ ನೀರಿಕ್ಷೆಯಲ್ಲಿದೆ.
39 ವಿಮಾನ ನಿಲ್ದಾಣಗಳು, 850 ಬಂದರುಗಳು, ರೈಲ್ವೆ ಇಲಾಖೆ, ರಸ್ತೆಗಳು, ತ್ಯಾಜ್ಯ ಶುದ್ಧೀಕರಣ ಕೇಂದ್ರಗಳು, ಎರಡು ವಿದ್ಯುತ್ ಕಂಪೆನಿ, ಬ್ಯಾಂಕ್‌ಗಳು, ಸಾವಿರಾರು ಎಕರೆ ಭೂ ಪ್ರದೇಶ, ವಿನೋದ ಮಂದಿರಗಳು (ಕ್ಯಾಸಿನೊ), ರಾಷ್ಟ್ರೀಯ ಲಾಟರಿ ಮಾರಾಟಕ್ಕಿರುವ ಸ್ವತ್ತುಗಳಲ್ಲಿ ಸೇರಿವೆ.
'ಮಾರಾಟ ಮಾಡಲು ಉದ್ದೇಶಿಸಿರುವ ಆಸ್ತಿಗಳಿಂದ 7100 ಕೋಟಿ ಡಾಲರ್ ಹಣ ಸಂಗ್ರಹವಾಗಲಿದೆ. ಈ ಮೊತ್ತವು ವಿದೇಶಗಳಿಂದ ಪಡೆದ ಸಾಲದ ಮರುಪಾವತಿಗೆ ನೆರವಾಗಲಿದೆ' ಎಂದು ಗ್ರೀಸ್‌ನ ಆಸ್ತಿ, ಪುನಾರಚನೆ, ಖಾಸಗೀಕರಣಗಳ ವಿಶೇಷ ಕಾರ್ಯದರ್ಶಿ ಜಾರ್ಜ್ ಕ್ರಿಸ್ಟೊಡೌಲಕಿಸ್ ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಗ್ರೀಸ್ ಸರ್ಕಾರವು ತೆಗೆದುಕೊಂಡಿರುವ ಕಟ್ಟು ನಿಟ್ಟಿನ ಕ್ರಮಗಳು ಈಗಾಗಲೇ ರಾಷ್ಟ್ರದಲ್ಲಿ ಮುಷ್ಕರ, ಹಿಂಸಾಚಾರ, ಘರ್ಷಣೆಗಳನ್ನು ಹುಟ್ಟುಹಾಕಿವೆ.












Click it and Unblock the Notifications