ಪತಿಗೆ ಬಾರ್ ಗರ್ಲುಗಳ ಸಹವಾಸ : ಪತ್ನಿಯ ಆತ್ಮಹತ್ಯೆ

Husband affairs with bar girls: wife kills self
ಮುಂಬೈ, ಜುಲೈ 1: ತನ್ನ ಸರಸ ಸರದಾರ ಪತಿ ಅನೇಕ ವಿವಾಹೇತರ ಸಂಬಂಧಗಳನ್ನು ಹೊಂದಿರುವುದು ಆಕೆಗೆ ತಿಳಿದಿತ್ತು. ಆದರೂ ಮೌನವಾಗಿ ಸಹಿಸಿಕೊಂಡಿದ್ದಳು. ಆದರೆ ಗುರುವಾರ ತನ್ನ ಮನೆಯಲ್ಲೇ ಪರಸ್ತ್ರಿ ಜತೆ ಸರಸ ಸಲ್ಲಾಪದಲ್ಲಿ ಇರುವುದನ್ನು ಕಂಡು ರೋಸಿ ಹೋದ ಆಕೆ ಸೀದಾ 19ನೇ ಮಹಡಿಯಿಂದ ಹಾರಿ ಪತಿಯ ಲೀಲೆಗಳಿಂದ ಮುಕ್ತಿ ಪಡೆದಿದ್ದಾಳೆ.

ಪೂರ್ವ ಖಂಡಿವಾಲಿಯ ಲೋಖಂಡವಾಲಾದಲ್ಲಿರುವ ಕ್ರಿಮ್ಸನ್ ಟವರ್ ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಮಮತಾ ಝಾಗೆ 15 ವರ್ಷದ ಮಗನಿದ್ದಾನೆ ಎಂದು ಸಮತಾ ನಗರ ಪೊಲೀಸರು ಹೇಳಿದ್ದಾರೆ. 36 ವರ್ಷದ ಮಮತಾ ತನ್ನ ಪುತ್ರ ಮತ್ತು ಅತ್ತೆ ಮಾವನನೊಂದಿಗೆ ಫ್ಲ್ಯಾಟ್ ನಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದರು. ಅಷ್ಟೇನೂ ಸ್ಥಿತವಂತರಲ್ಲದ ಮಮತಾಳ ಅಪ್ಪ-ಅಮ್ಮದೆಹಲಿಯಲ್ಲಿದ್ದಾರೆ.

ಪತಿ ಮುಕೇಶ್ ನೈಟ್ ಕ್ಲಬ್ಬೊಂದರಲ್ಲಿ ವೃತ್ತಿಯಲ್ಲಿದ್ದಾನೆ. ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬರುವಾಗ ಬಾರ್ ಗರ್ಲುಗಳನ್ನು ಮನೆಗೆ ಕರೆದುಕೊಂಡು ಬಂದು ಅವರೊಂದಿಗೆ ಚಕ್ಕಂದ ಮಾಡುವ ಪ್ರವೃತ್ತಿಯಿಟ್ಟುಕೊಂಡಿದ್ದ.

ಸೋಮವಾರ ಬೆಳಗ್ಗೆ ಐದು ಗಂಟೆಗೆ ಯುವತಿಯೊಬ್ಬಳೊಂದಿಗೆ ಪತಿರಾಯ ಮನೆಗೆ ಬಂದಿದ್ದಾನೆ. ಪತ್ನಿ ಮಮತಾ ಸವಿ ನಿದ್ದೆಯಲ್ಲಿದ್ದರು. ಎಚ್ಚರವಾಗಿ ನೋಡಿದಾಗ ಈ ಮಹಾಶಯ ಬಂದವಳೊಂದಿಗೆ ಚಕ್ಕಂಬಂಧಿಯಲ್ಲಿದ್ದಾನೆ. ಇದನ್ನು ಕಂಡು ಕುಪಿತಗೊಂಡ ಮಮತಾ ಬಂದವಳನ್ನು ದರದರ ಎಳೆದು ಮನೆಯಿಂದ ಆಚೆ ಹಾಕಿ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆದರೆ ಏನೂ ನಡೆದೇ ಇಲ್ಲ ಎನ್ನುವಂತೆ ಪತಿಮಹಾಶಯ ಆರಾಮಾಗಿ ನಿದ್ದೆಗೆ ಶರಣಾಗಿದ್ದಾನೆ. ಅದೇ ವೇಳೆ, ಮನೆಯಿಂದ ಹೊರಬಂದ ಮಮತಾ ಬೆಳಗ್ಗೆ 6.45ರಲ್ಲಿ 19ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+