ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೌತಶಾಸ್ತ್ರ ಬಿಟ್ಟು ಕಾಮಶಾಸ್ತ್ರ ಹಿಡಿದ ಪ್ರೊಫೆಸರ್ ಜೈಲಿಗೆ

By Srinath
|
Google Oneindia Kannada News

Dr R K Singhal
ಜೈಪುರ, ಜೂನ್ 30: ಇಲ್ಲಿನ ರಾಜಸ್ಥಾನ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ತನ್ನ ವಿದ್ಯಾರ್ಥಿನಿಗೆ ಭೌತಶಾಸ್ತ್ರದ ಬದಲು ಕಾಮಶಾಸ್ತ್ರ ಬೋಧಿಸಿ, ಇದೀಗ ಜೈಲುಪಾಲಾಗಿದ್ದಾನೆ.

ರೀಸರ್ಚ್ ಗೈಡ್ ಡಾ. ಆರ್.ಕೆ. ಸಿಂಘಾಲ್ ಅನೇಕ ತಿಂಗಳುಗಳಿಂದ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಬಾಧಿತ ವಿದ್ಯಾರ್ಥಿನಿ ಪೊಲೀಸರಿಗೆ ಅಲವತ್ತುಕೊಂಡಾಗ ಕಾಮಶಾಸ್ತ್ರ ಪ್ರವೀಣನ ಲೀಲೆಗಳು ಬಹಿರಂಗವಾಗಿವೆ.

ಎಚ್. ಡಿ. ಮಾಡಬೇಕೆಂದರೆ ನನ್ನೊಂದಿಗೆ ಸಹಕರಿಸು. ನನ್ನ ಲೈಂಗಿಕ ತೃಷೆ ನೀಗಿಸು ಎಂದು ಸೀಂಘಾಲ್ ಪೀಡಿಸತೊಡಗಿದ. ಫೆಬ್ರವರಿಲ್ಲಿ ನನ್ನ ಮಾನಭಂಗವನ್ನೂ ಮಾಡಿದ ಎಂದು ಆ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಅಷ್ಟೇ ಅಲ್ಲ. ಮತ್ತೊಬ್ಬ ಪ್ರಾಧ್ಯಾಪಕ ಎಸ್. ಎನ್. ಡೋಲಿಯಾ ಜತೆ ಸೇರಿ ನನ್ನ ಮುಖವನ್ನು ಮತ್ಯಾವುದೋ ಸೆಕ್ಸ್ ಚಿತ್ರಕ್ಕೆ ಅಂಟಿಸಿ ಸಿಂಘಾಲ್ ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ ಎಂದು ರೀಸರ್ಚ್ ವಿದ್ಯಾರ್ಥಿನಿ ದೂರಿದ್ದಾಳೆ. ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದು, ಸಿಂಘಾಲನನ್ನು ಬಂಧಿಸಿದ್ದೇವೆ ಎಂದು ಜೈಪುರ ಪೊಲೀಸ್ ಆಯುಕ್ತ ಬಿ. ಎಲ್. ಸೋನಿ ಗುರುವಾರ ತಿಳಿಸಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ ಬಾಧಿತ ವಿದ್ಯಾರ್ಥಿನಿಯು ಕಾಮಶಾಸ್ತ್ರ ಬೋಧಕರ ವಿರುದ್ಧ ವಿವಿ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಜರುಗಿಸಲಿಲ್ಲ. ಆದರೆ ವಿದ್ಯಾರ್ಥಿನಿಯು ಪೊಲೀಸ್ ಕಂಪ್ಲೇಟ್ ನೀಡುತ್ತಿದ್ದಂತೆ ಸಿಂಘಾಲ್ ಮತ್ತು ಡೋಲಿಯಾ ಇಬ್ಬರನ್ನೂ ವಿಶ್ವವಿದ್ಯಾಲಯವು ಹೊರಹಾಕಿದೆ. ಜತೆಗೆ, ಹೈಕೋರ್ಟಿನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದೂ ಕೇಳಿಕೊಂಡಿದೆ.

English summary
A professor at the Rajasthan University has been arrested (June 30) for allegedly demanding sexual favours from his student. The victim has alleged that her research guide Dr R K Singhal of the Physics department and his colleague S N Dolia allegedly even blackmailed by morphing her face onto some obscene pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X