ಫೇಸ್ ಬುಕ್ ಧ್ವಂಸಕ್ಕೆ ಗೂಗಲ್ ಬಿಟ್ಟಿದೆ ಪ್ಲಸ್ ಬಾಣ

Google Plus
ಕ್ಯಾಲಿಫೋರ್ನಿಯಾ ಜೂ 29: ಅಂತೂ ಕೊನೆಗೂ ಸಾಮಾಜಿಕ ಜಾಲ ತಾಣ ಪ್ರಪಂಚದಲ್ಲಿ ಫೇಸ್ ಬುಕ್ ನ ಏಕಸ್ವಾಮ್ಯತೆ ಮುರಿಯಲು ಗೂಗಲ್ ಸಿದ್ಧವಾಗುತ್ತಿದೆ. ತನ್ನ ಹೊಸ ಉತ್ಪನ್ನ ಗೂಗಲ್ ಪ್ಲಸ್ ಮೂಲಕ ಫೇಸ್ ಬುಕ್ ನ ಜನಪ್ರಿಯತೆಯನ್ನು ಕೊಲ್ಲಲ್ಉ ಗೂಗಲ್ ಯತ್ನಿಸುತ್ತಿದೆ. ಗೂಗಲ್ ಸರ್ಕಲ್ ಸುತ್ತಿ ಎನ್ನುತ್ತಿದ್ದ ಸಂಸ್ಥೆಯ ವಿಜ್ಞಾನಿಗಳು ಇನ್ನಷ್ಟು ಸೌಲಭ್ಯಗಳನ್ನು ಒಟ್ಟು ಮಾಡಿ ವಿನೂತನ ಜಾಲ ತಾಣGoogle + ವನ್ನು ನೀಡುತ್ತಿದ್ದಾರೆ.

ಆನ್ ಲೈನ್ ಮೂಲಕ ಜನರು ಪರಸ್ಪರ ಸಂಪರ್ಕ ಹೊಂದುತ್ತಿರುವುದು ಹೆಚ್ಚುತ್ತಿದೆ. ಸಾಮಾಜಿಕ ಜಾಲ ತಾಣಗಳು ಹೊಸ ಸಂವಹನ ಮಾಧ್ಯಮವಾಗಿ ಯಶಸ್ವಿಯಾಗುತ್ತಿವೆ. ಫೇಸ್ ಬುಕ್ ಮಾದರಿಯಲ್ಲಿರುವ ಗೂಗಲ್ ಪ್ಲಸ್ ಗ್ರಾಹಕರಿಗೆ ಹೊಸ ಅನುಭವ ನೀಡಲಿದಂತೆ.

ಸರ್ಕಲ್ ಮೂಲಕ ನಿಮ್ಮದೇ ಆದ ಹೊಸ ಜಾಲವನ್ನು ಸೃಷ್ಟಿಸಿಕೊಳ್ಳಬಹುದು. ಇದು ಸುರಕ್ಷಿತವಾಗಿದ್ದು, ಅನಾಮಿಕ ಹಾಗೂ ದುಷ್ಕರ್ಮಿಗಳಿಂದ ನಿಮ್ಮ ಹಾಗೂ ನಿಮ್ಮ ಗೆಳೆಯ ಮಾಹಿತಿ ಮೇಲೆ ದಾಳಿಯನ್ನು ತಪ್ಪಿಸಬಹುದಾಗಿದೆ. ಗೆಳೆಯರು, ಸಹೋದ್ಯೋಗಿಗಳು, ಸಹಪಾಠಿಗಳು ಹೀಗೆ ಬೇಕಾದಂತೆ ಸರ್ಕಲ್ ಸುತ್ತಬಹುದು.

ಹ್ಯಾಂಗ್ ಔಟ್ ಮೂಲಕ ನೀವು ವಾಯ್ಸ್ ಚಾಟ್, ವಿಡಿಯೋ ಚಾಟ್ ಮಾಡಬಹುದು. ಗ್ರೂಪ್ ಚಾಟಿಂಗ್ ನ ಹೊಸ ಅನುಭವ ಇದರಿಂದ ಸಿಗುತ್ತದೆ.

ಇದರ ಜೊತೆಗೆ ತಾಜಾ ತಾಜಾ ಸುದ್ದಿ, ಮಾಹಿತಿ ನಿಮಗೆ ನೀಡಲು ಸ್ಪಾರ್ಕ್ಸ್ ಪ್ಲಸ್ ಇದೆ. ಸ್ಟಂಬಲ್ ಅಪನ್ ಮಾದರಿಯಲ್ಲಿ ನಿಮ್ಮ ಆಯ್ಕೆಯ ಸುದ್ದಿಗಳನ್ನು ವಿವಿಧ ವೆಬ್ ಸೈಟ್ ನಿಂದ ನೀಡುತ್ತಿದೆ.

ಮೊಬೈಲ್: ನಿಮ್ಮ ಮೊಬೈಲ್ ಹಾಗೂ ಇತರೆ ಸಾಧಕಗಳನ್ನು ಇಂಟಿಗ್ರೇಡ್ ಮಾಡಿಕೊಳ್ಳಬಹುದು. ಜಿಪಿಎಸ್, ಕೆಮೆರಾ ಹಾಗೂ ಗೂಗಲ್ ಲ್ಯಾಟಿಟ್ಯೂಡ್ ಮುಂತಾದ ಸೌಲಭ್ಯ ಬಳಕೆಯ ನಿಜ ಅನುಭವ ಇದರಿಂದ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+