ನರ್ಸಿ0ಗ್ ವಿದ್ಯಾರ್ಥಿನಿ ಮಾನಭಂಗ: ಪ್ರಿನ್ಸಿಪಾಲ್ ಬಂಧನ

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಿ ಪಾಸು ಮಾಡಲು ಪ್ರಿನ್ಸಿಪಾಲ್ ತ್ರಿಲೋಕ್ ಚಂದ್ ತ್ರಿಪಾಠಿ ಇನ್ನೂ ಇಬ್ಬರು ವಿದ್ಯಾರ್ಥಿನಿಯರಿಂದ 4,000 ರು. ಲಂಚ ಪಡೆದಿರುವುದಾಗಿಯೂ ತಿಳಿದುಬಂದಿದೆ.
ವಾರ್ಷಿಕ ಪರೀಕ್ಷೆ ಆರಂಭಕ್ಕೂ ಮುನ್ನ, ಮೊದಲ ವರ್ಷದ ನರ್ಸಿ0ಗ್ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಅಂಕ ನೀಡುವುದಾಗಿ ಪುಸಲಾಯಿಸಿ, ಲೈಂಗಿಕವಾಗಿ ಅವಳನ್ನು ತ್ರಿಪಾಠಿ ಪೀಡಿಸತೊಡಗಿದರು. ಇದಕ್ಕೆ ಸಹಕರಿಸದಿದ್ದಲ್ಲಿ ಪರೀಕ್ಷೆಯಲ್ಲಿ ಫೈಲ್ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದರು ಎಂದು ತ್ರಿಪಾಠಿಯನ್ನು ವಶಕ್ಕೆ ತೆಗೆದುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲ್ ಚಂದ್ ರಾಣಾ ತಿಳಿಸಿದ್ದಾರೆ.
ಆದರೆ ಯುವತಿ ಅದಕ್ಕೆ ಪ್ರಿನ್ಸಿಗೆ ಸೊಪ್ಪು ಹಾಕದಿದ್ದಾಗ ಅನುತ್ತೀರ್ಣಳಾಗಿದ್ದಳು. ಆಗ ಮತ್ತೆ ಅವಳ ಬೆನ್ನು ಬಿದ್ದ ಪ್ರಿನ್ಸಿ ಮತ್ತೆ ಲೈಂಗಿಕ ಸುಖದ ಬೇಡಿಕೆಯಿಟ್ಟಿದ್ದ. ಅದರಂತೆ ಅವಳ ಮಾನಭಂಗಕ್ಕೂ ಯತ್ನಿಸಿದ ಎಂದು ರಾಣಾ ಹೇಳಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಿನ್ಸಿ ತ್ರಿಪಾಠಿಯನ್ನು ಸೋಮವಾರ (ಜೂನ್ 27) ಬಂಧಿಸಿದರು.












Click it and Unblock the Notifications