ಮುಂಬೈ ರೇವ್ ಪಾರ್ಟಿ: 300 ಯುವಕ, ಯುವತಿಯರ ಸೆರೆ
ರಾಯಗಢ,
ಜೂನ್ 27: ವಿಶ್ವ ಮಾದಕ ದ್ರವ್ಯ ವಿರೋಧಿ ದಿನವಾದ ಭಾನುವಾರ ರಾತ್ರಿ ಪೂನಾ ಹೆದ್ದಾರಿಯಲ್ಲಿ ರಾಯಗಢ ಸಮೀಪ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು 300 ಯುವಕ, ಯುವತಿಯರನ್ನು ಸೆರೆ ಹಿಡಿದಿದ್ದಾರೆ. ಬಂಧಿತರು 20-30 ವರ್ಷದವರಾಗಿದ್ದು, 60 ಮಂದಿ ವಿದ್ಯಾರ್ಥಿನಿಯರೂ ಇದ್ದಾರೆ. id="toptextpromo">ಮಾದಕ
ದ್ರವ್ಯ ನಿಯಂತ್ರಣ ವಿಭಾಗದ ಹಿರಿಯ ಅಧಿಕಾರಿ ಅನಿಲ್ ಜಾಧವ್ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದು, ಪೊಲೀಸರು ಅವರನ್ನೂ ಬಂಧಿಸಿದ್ದಾರೆ. ಒಬ್ಬ ಸಂಘಟಕನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಂಬೈನಿಂದ
100 ಕಿ. ಮೀ. ದೂರದಲ್ಲಿ ಕಾರ್ಜಾತ್ ನಲ್ಲಿರುವ ಹೋಟೆಲ್ ಮೌಂಟ್ ವ್ಯೂನಲ್ಲಿ 'ಬಿಯಾಂಡ್ ಲಾಜಿಕ್' ಎಂಬ ಕಂಪನಿ ರೇವ್ ಪಾರ್ಟಿಯನ್ನು ಆಯೋಜಿಸಿತ್ತು. ಫೇಸ್ ಬುಕ್ ಮೂಲಕ ಯುವಕ, ಯುವತಿಯರಿಗೆ ರೇವ್ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು.











Click it and Unblock the Notifications