ಪುಣ್ಯಕೋಟಿ ಹಾಲೇ ಸರ್ವಶ್ರೇಷ್ಠ: ಪುರಾಣ ಅಲ್ಲ, ತಾಜಾ ಅಧ್ಯಯನ

'A2 allele ಎನ್ನುವ ಭಾರತೀಯ ತಳಿಯ ಹಸು ಮತ್ತು ಎಮ್ಮೆಗಳ ಹಾಲು ಶೇ. 100ರಷ್ಟು ಉತ್ತಮವಾಗಿದ್ದರೆ ವಿದೇಶಿ ತಳಿಗಳ ಹಾಲು ಸುಮಾರು ಶೇ. 60ರಷ್ಟು ಮಾತ್ರ ಉತ್ತಮವಾಗಿದೆ' ಎಂದು NBAGR ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇನ್ನಿತರ ದೃಷ್ಟಿಯಿಂದಲೂ ಭಾರತೀಯ ತಳಿಯ ಹಸು ಮತ್ತು ಎಮ್ಮೆಗಳ ಹಾಲು ಉತ್ತಮವೆನಿಸಿದೆ.
1984ರಲ್ಲಿ ಅಸ್ತಿತ್ವಕ್ಕೆ ಬಂದ NBAGR ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಒಂದು ಘಟಕವಾಗಿದ್ದು, ಹರಿಯಾಣಾನದ ಕರ್ನಾಲ್‌ನಲ್ಲಿ 1884ರಿಂದಲೂ ಅಸ್ತಿತ್ವದಲ್ಲಿದೆ.
ಕೆಂಪು ಸಿಂಧಿ, ಸಹಿವಾಲ್, ಥಾರ್ ಪಾರ್ಕರ್, ರತಿ ಮತ್ತು ಗಿರ್ ಎನ್ನುವ ಭಾರತೀಯ ತಳಿಯ ದನಗಳ ಹಾಲು ಸರ್ವೋತ್ಕೃಷ್ಟ ಎನ್ನುವ ವಿಚಾರ ಸಂಶೋಧನೆಯಿಂದ ವ್ಯಕ್ತವಾಗಿದೆ ಎಂದು NBAGR ನಿರ್ದೇಶಕ ಬಿ.ಕೆ. ಜೋಶಿ ಹೇಳಿದರು. ಈ ತಳಿಯ ದನಗಳ ಹಾಲು ಅನೇಕ ರೋಗಗಳ ಉಪಶಮನದಲ್ಲೂ ಪರಿಣಾಮಕಾರಿ ಎನ್ನಲಾಗಿದೆ.












Click it and Unblock the Notifications