ಆಸ್ಟ್ರೇಲಿಯಾ ಯುವತಿಯ ಅತ್ಯಾಚಾರ: ಇಬ್ಬರ ಬಂಧನ

ಆಸ್ಟ್ರೇಲಿಯಾದ 23 ವರ್ಷದ ಯುವತಿ ಮರ್ಸಿ ಲೂಜ್ ಎಂಬಾಕೆಯೇ ಅತ್ಯಾಚಾರಕ್ಕೀಡಾದವಳು. ಈಕೆ ಭಾರತದ ಪ್ರವಾಸಕ್ಕಾಗಿ ಆರು ತಿಂಗಳ ವೀಸಾದಲ್ಲಿ ಬಂದಿದ್ದಳು. ಎಲ್ಲೆಡೆ ಸುತ್ತಾಡಿದ ಈಕೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಳು. ಆ ನಂತರ ಜೂನ್ 12ರಂದು ಮೈಸೂರಿಗೆ ಬಂದ ಈಕೆ ಇಲ್ಲಿರುವ ಪ್ರೇಕ್ಷಣೀಯ ತಾಣಗಳನ್ನು ವೀಕ್ಷಿಸಿದ್ದಳು. ಅಲ್ಲದೆ ಹೋಟೆಲ್‌ನಲ್ಲಿ ರೂಂ ಪಡೆದು ತಂಗುವ ಬದಲು ಮೈಸೂರಿನ ಲಕ್ಷ್ಮಿಪುರಂನ ವಕೀಲರೊಬ್ಬರ ಮನೆಯಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ತಂಗಿದ್ದಳು.
ಈಕೆ ಜೂನ್ 17ರಂದು ಹೊರಗೆ ಹೋಗಿ ಹೋಟೆಲ್‌ನಲ್ಲಿ ಕಾಫಿ ಕುಡಿಯುತ್ತಿದ್ದಾಗ ವಿಶ್ವಾಸ್ ಎಂಬಾತ ಈಕೆಯನ್ನು ಪರಿಚಯಿಸಿಕೊಂಡಿದ್ದನು. ಇಂಗ್ಲಿಷ್ ಭಾಷೆಯನ್ನು ಆತ ಚೆನ್ನಾಗಿ ಮಾತನಾಡುತ್ತಿದ್ದುದರಿಂದ ಆಕೆ ಅವನಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂಬ ಹಿನ್ನಲೆಯಲ್ಲಿ ಮೊಬೈಲ್ ನಂಬರ್ ನೀಡಿದ್ದಳು. ಮಾತನಾಡುತ್ತಲೇ ಆಕೆಯ ವಿಶ್ವಾಸಗಳಿಸಿದ ಆತ ಅವಳ ಮೇಲೆ ಅತ್ಯಾಚಾರ ಎಸಗಲು ಸ್ಕೆಚ್ ಹಾಕಿದ್ದನು.
ಆಕೆ ಜೂನ್ 24ರಂದು ಬೆಂಗಳೂರಿನಲ್ಲಿರುವ ತನ್ನ ಗೆಳತಿ ಮನೆಗೆ ಹೋಗುವುದಾಗಿ ವಿಶ್ವಾಸ್‌ಗೆ ತಿಳಿಸಿದ ಸಂದರ್ಭ ಆತ ನಾನೇ ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುವುದಾಗಿ ತಿಳಿಸಿದ್ದಾನೆ. ಆದರೆ ಆಕೆ ನಾನು ಬರುವುದಿಲ್ಲ ಬಸ್‌ನಲ್ಲಿ ಹೋಗುವುದಾಗಿ ತಿಳಿಸಿ ಮೈಸೂರಿನಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ಸನ್ನೇರಿದ್ದಳು. ಆದರೆ ಪದೇ ಪದೇ ಆಕೆಗೆ ಫೋನ್ ಮಾಡಿದ ವಿಶ್ವಾಸ್ ಆಕೆಯನ್ನು ಚನ್ನಪಟ್ಟಣದಲ್ಲಿ ಬಸ್‌ನಿಂದ ಇಳಿಸಿ ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ.
ಬಳಿಕ ಊಟ ಮಾಡುವ ನೆಪದಲ್ಲಿ ಚೆನ್ನಪಟ್ಟಣದ ನ್ಯೂ ಐರೀಸ್ ಲಾಡ್ಜ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಇವನೊಂದಿಗೆ ಇನ್ನೊಬ್ಬ ಗೆಳೆಯ ಚಂದ್ರ ಎಂಬಾತ ಸೇರಿಕೊಂಡಿದ್ದಾನೆ. ಅಲ್ಲಿ ಮದ್ಯ ಸೇವಿಸಿದ ಬಳಿಕ ವಿದೇಶಿ ಯುವತಿ ಮರ್ಸಿ ಲೂಜ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೋಗುವ ಸಂದರ್ಭ ಲಾಡ್ಜ್‌ನ ಮಾಲೀಕರ ಸಂಬಂಧಿ ಶೃಂಖಲ್ ಗೌಡ ಎಂಬಾತ ಸಹಾಯ ಮಾಡುವುದಾಗಿ ಆಕೆಯನ್ನು ನಂಬಿಸಿ ಆತನೂ ಕೂಡ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅವರೆಲ್ಲರಿಂದ ತಪ್ಪಿಸಿಕೊಂಡು ಮೈಸೂರಿಗೆ ಬಂದ ಮರ್ಸಿ ಲೂಜ್ ಲಕ್ಷ್ಮಿಪುರಂ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ದೂರು ದಾಖಲಿಸಿಕೊಂಡ ಲಕ್ಷ್ಮಿಪುರಂ ಠಾಣೆ ಇನ್ಸ್‌ಪೆಕ್ಟರ್ ಸೂರ್ಯನಾರಾಯಣ್ ರಾವ್ ಹಾಗೂ ಎನ್.ಆರ್.ಠಾಣೆ ಇನ್ಸ್‌ಪೆಕ್ಟರ್ ಯಶವಂತ್‌ಕುಮಾರ್ ಅವರು ಕಾರ್ಯಾಚರಣೆ ನಡೆಸಿದ್ದು ಆರೋಪಿಗಳಾದ ವಿಶ್ವಾಸ್ ಹಾಗೂ ಚಂದ್ರ ಎಂಬಿಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications