ಜಕಾರ್ತದಲ್ಲಿ ಸೈನಾ ನೆಹ್ವಾಲ್ ಹ್ಯಾಟ್ರಿಕ್ ಕನಸು ಭಗ್ನ
ಜಕಾರ್ತ
ಜೂ 26: ಇಂಡೋನೇಷ್ಯಾ ಓಪನ್ ಸೂಪರ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್, ತಮ್ಮ ಚೀನಾ ಎದುರಾಳಿ ವಾಂಗ್ ಯಿಹಾನ್ ವಿರುದ್ಧ ಸೋಲುಂಡಿದ್ದಾರೆ. ಭಾರಿ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಆರಂಭ ಮುನ್ನಡೆ ಪಡೆದರೂ ಪಂದ್ಯ ಗೆಲ್ಲಲಾಗದೆ ಸೈನಾ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. id="toptextpromo">ಸೈನಾ
ಮಹಿಳೆಯರ ಸಿಂಗಲ್ಸ್ ವಿಭಾಗದ ಇಂಡೋನೇಷ್ಯಾ ಓಪನ್ ಸೂಪರ್ ಪ್ರಶಸ್ತಿ ಹ್ಯಾಟ್ರಿಕ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ವಾಂಗ್ ಯಿಹಾನ್ 12-21, 23-21, 21-14 ರಲ್ಲಿ ಸೈನಾರನ್ನು ಸೋಲಿಸಿದ್ದಾರೆ. 21 ವರ್ಷದ ಸೈನಾ ನೆಹ್ವಾಲ್ ಆರಂಭದ ಸೆಟ್ ಅನ್ನು 21-12ರಲ್ಲಿ ಗೆದ್ದು ಭರವಸೆ ಮೂಡಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಎರಡನೇ
ಸೆಟ್ ನಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡ ಸೈನಾ 19-19ರ ಸಮಬಲ ಹೋರಾಟ ನೀಡಿದರೂ ಅಂತಿಮವಾಗಿ 21-23ರಲ್ಲಿ ಸೆಟ್ ಕಳೆದುಕೊಂಡರು. ಕೊನೆ ಸೆಟ್ ನ ಆರಂಭದಲ್ಲೇ 4-1ರ ಮುನ್ನಡೆ ಪಡೆದ ವಾಂಗ್, 19-12 ಅಂಕಗಳಿಸಿ ಗೆಲುವಿನ ಹೊಸ್ತಿಲಲ್ಲಿ ನಿಂತರು. ಆಗಲೂ ಸಾಕಷ್ಟು ಶ್ರಮವಹಿಸಿ ಆಡಿದ ಸೈನಾ ಹೆಚ್ಚಿನ ಅಂಕಗಳಿಸಲಾಗದೆ ಸೆಟ್ ಹಾಗೂ ಪಂದ್ಯವನ್ನು ಬಿಟ್ಟುಕೊಟ್ಟರು. ಈ ವರ್ಷದಲ್ಲಿ ಸ್ವಿಸ್ ಓಪನ್ ನಂತರ ಯಾವುದೇ ಪ್ರಶಸ್ತಿ ಗೆಲ್ಲದಿದ್ದರೂ ಸೈನಾ ಅವರು ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿಯಾಗಿ ಮುಂದುವರೆದಿದ್ದಾರೆ.











Click it and Unblock the Notifications