ಪೇಜಾವರ ಶ್ರೀಗಳ ದೇಹ ತೂಕ 12 ವರ್ಷದಿಂದ ಅಷ್ಟೇ ಇದೆ!
ಮಂಗಳೂರು
ಜೂ 23: ಕಳೆದ 12 ವರ್ಷಗಳಿಂದ ಪೇಜಾವರಶ್ರೀ ವಿಶ್ವೇಶ ತೀರ್ಥರ ದೇಹತೂಕವನ್ನು ಒಂದೇ ರೀತಿ ಕಾಪಾಡಿಕೊಂಡು ಬಂದಿದ್ದಾರೆ ಎಂಬ ಕುತೂಹಲಕರ ಮಾಹಿತಿ ಬಹಿರಂಗವಾಗಿದೆ. id="toptextpromo">ಕಲ್ಕೂರಾ
ಪ್ರತಿಷ್ಠಾನದ ಪ್ರದಿಪ್ ಕಲ್ಕೂರ ನಿವಾಸದಲ್ಲಿ ಬುಧವಾರ ಪೇಜಾವರ ಶ್ರೀಗಳ ತುಲಾಭಾರ ಮಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿದು ಬಂದಿದೆ.. 12 ವರ್ಷಗಳ ಹಿಂದೆ ಇದ್ದ ತೂಕ ಈಗಿನ ತೂಕ ಎರಡೂ ಒಂದೇ ಆಗಿರುವುದು ಕಂಡುಬಂದಿದೆ. ದೈವಬಲ, ಮಾನಸಿಕ ಬಲದೊಂದಿಗೆ ದೇಹ ಬಲದ ಸಮತೋಲನವನ್ನು ಶ್ರೀಗಳು ಕಾಪಾಡಿಕೊಂಡು ಬಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಗೊಮ್ಮೆ
ಈಗೊಮ್ಮೆ ಪೇಜಾವರಶ್ರೀಗಳ ದೇಹತೂಕದಲ್ಲಿ 100 ರಿಂದ 500ಗ್ರಾಂ ಹೆಚ್ಚು ಅಥವಾ ಕಡಿಮೆ ಆಗಿದ್ದು ಹೊರತುಪಡಿಸಿದರೆ ಅವರ ದೇಹತೂಕ 12 ವರ್ಷಗಳಿಂದ 58 ಕೆಜಿಯಲ್ಲಿಯೇ ಇದೆ ಎಂದು ಅವರ ಆಪ್ತ ಶಿಷ್ಯರು ಹೇಳಿದ್ದಾರೆ. ತಮ್ಮ ಬಳಿ ಸದಾ ಇಟ್ಟಿಕೊಂಡಿರುವ 10 ಕೆಜಿ ತೂಕದ ದೇವರ ಪೆಟ್ಟಿಗೆ ಇರಿಸಿಕೊಂಡು ತುಲಾಭಾರ ನೆರವೇರಿಸಿಕೊಂಡರು. ನಂತರ ನೆರೆದಿದ್ದವರಿಗೆ ಆಶೀರ್ವಚನ ನೀಡಿದರು. ಹಸ್ತಿನಾವತಿಯಲ್ಲಿ ಬೃಹತ್ ಹಿಂದೂ ದೇಗುಲ ಸ್ಥಾಪನೆಯ ಕನಸು ಹಂಚಿಕೊಂಡರು.ಲಂಘನಂ
ಪರಮ
ಔಷಧಂ:
ಉಪವಾಸ
ವ್ರತ
ಕೈಗೊಳ್ಳುವಲ್ಲಿ
ಎತ್ತಿದ
ಕೈ
ಎನಿಸಿರುವ
ಪೇಜಾವರಶ್ರೀಗಳು
ಇಳಿ
ವಯಸ್ಸಿನಲ್ಲೂ
ಉಪವಾಸ
ಕೈ
ಬಿಟ್ಟಿಲ್ಲ.
ಮಿತ
ಆಹಾರ,
ಸದಾ
ಕೃಷ್ಣ
ಧ್ಯಾನ,
ಮಧ್ಯೆ
ಮಧ್ಯೆ
ಸಮಾಜಿಕ
ಕಾರ್ಯಕ್ರಮಗಳ
ಗಜಿಬಿಬಿ,
ನಡಿಗೆ
ಇವೆಲ್ಲವೂ
ಶ್ರೀಗಳ
ಆರೋಗ್ಯವನ್ನು
ಕಾಪಾಡುತ್ತಾ
ಬಂದಿದೆ.












Click it and Unblock the Notifications