ರಾಧಿಕಾ ನನ್ನ ಕುಟುಂಬ ಎಂದು ಆಣೆ ಮಾಡಿ, ಕುಮಾರಣ್ಣ

HD Kumaraswamy Radhika Affair and truth Test
'ನನಗೆ ಕುಟುಂಬದ ವ್ಯವಹಾರದ ಜತೆ ಯಾವುದೇ ಸಂಬಂಧವಿಲ್ಲ, ಏಕೆಂದರೆ 1983ರಲ್ಲಿ ನಮ್ಮ ಕುಟುಂಬ ಬೇರೆಯಾಗಿತ್ತು. ನಾನು, ಅನಿತಾ ಹಾಗೂ ಪುತ್ರ ನಿಖಿಲ್ ಇದು ನನ್ನ ಕುಟುಂಬ"ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ರಾಧಿಕಾ ಹಾಗೂ ಆಕೆ ಮಗುವಿನ ಕಥೆ ಏನು ಎಂಬ ಕೂಗು ರಾಧಿಕಾ ಅವರ ಊರಿನ ಕಡೆಯಿಂದ ಎದ್ದಿದೆ.

ಇತ್ತೀಚೆಗೆ ದೈನಿಕವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ರಾಧಿಕಾ, ಹೌದು...ನಾನು ರಾಜಕಾರಣ ಯೊಬ್ಬರನ್ನು ಮದುವೆಯಾಗಿದ್ದೇನೆ. ಮಗು ಇರುವುದು ಕೂಡ ನಿಜ. ಆದರೆ ಎರಡಲ್ಲ . ನಮಗಿರುವುದು ಒಂದೇ ಮಗು, ಹೆಸರು ಶಮಿಕಾ ಕೆ ಸ್ವಾಮಿ ಎಂದು ಬಹಿರಂಗವಾಗಿ ಹೇಳಿದ್ದರು.

ಇದಕ್ಕೆ ಏನಂತೀರಾ?:ರಾಧಿಕಾ-ಕುಮಾರಸ್ವಾಮಿ ಹಾಗೂ ಶಮಿಕಾ ಕೆ ಸ್ವಾಮಿ ಫೋಟೋ ಸಮೇತ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನಟಿ ಹಾಗೂ ರಾಜಕಾರಣಿಯ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್, ಊಹಾಪೋಹಗಳು ಹರಿದಾಡುತ್ತಿದ್ದರೂ ಸಹ ಇತ್ತೀಚಿನವರಗೆ ರಾಧಿಕಾ ಅಧಿಕೃತವಾಗಿ ಎಲ್ಲಿಯೂ ಹೇಳಿರಲಿಲ್ಲ. ಇತ್ತೀಚೆಗಷ್ಟೆ ರಾಧಿಕಾ ಹಲವು ವರ್ಷಗಳಿಂದ ತಮ್ಮ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದ ನೋವನ್ನು ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದರು.

ಆದರೆ, ಕುಮಾರಸ್ವಾಮಿ ಮಾತ್ರ ಒಮ್ಮೆ ಕೂಡಾ ಬಹಿರಂಗವಾಗಿ ಈ ಬಗ್ಗೆ ಹೇಳಿಲ್ಲ. ಸಂಬಂಧ ಇರಿಸಿಕೊಳ್ಳುವುದು ವೈಯಕ್ತಿಕ ವಿಚಾರವಾದರೂ ಮಾಜಿ ಸಿಎಂಯೊಬ್ಬರು ತಮ್ಮ ಸಂಗಾತಿಯೊಬ್ಬರನ್ನು ಅಧಿಕೃತವಾಗಿ ಒಪ್ಪಿಕೊಂಡು ದೊಡ್ಡತನ ಮೆರೆಯುವುದು ಉತ್ತಮ. ಇಲ್ಲದಿದ್ದರೆ ಎರಡನೇ ದರ್ಜೆ ಪತ್ನಿ ಸ್ಥಾನದಲ್ಲಿ ಉಳಿಯುವ ಕಷ್ಟ ಏಕೆ ಕೊಡುತ್ತೀರಾ? ಹೇಳಿ, ರಾಧಿಕಾರನ್ನು ಮನೆ ತುಂಬಿಸಿಕೊಳ್ಳುತ್ತೇನೆ ಎಂದು ಆಣೆ ಮಾಡುವಿರಾ?

ಈ ಮಧ್ಯೆ, ಬಿಜೆಪಿ ಭ್ರಷ್ಟಾಚಾರ, ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಾ, ಬಿಎಸ್‌ಕೆ ಟ್ರೇಡಿಂಗ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ನಾನು, ಅನಿತಾ ಹಾಗೂ ನಿಖಿಲ್ ಇದು ನನ್ನ ಕುಟುಂಬ ಎಂದು ಸ್ಪಷ್ಟನೆ ನೀಡಿದ್ದರು. ಕುಟುಂಬ ರಾಜಕಾರಣ ಮಾಡುವುದು ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳು, ನಮ್ಮ ಕುಟುಂಬಕ್ಕೂ ನಾನು ಯಡಿಯೂರಪ್ಪ ಅವರ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೂ ಸಂಬಂಧವಿಲ್ಲ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+