ಅಮಾಯಕಿಯ ಮೇಲೆ ಕೌರವರ ಲೈಂಗಿಕ ದೌರ್ಜನ್ಯ

Minor sexually abused by 100 (Suggestive photo)
ಕೊಚ್ಚಿ, ಜೂ. 19 : ಒಬ್ಬ ಅಮಾಯಕ 14 ವರ್ಷದ ಬಾಲೆಯ ಮೇಲೆ ಎಷ್ಟು ವರ್ಷ ಲೈಂಗಿಕವಾಗಿ ದೌರ್ಜನ್ಯವೆಸಗಲು ಸಾಧ್ಯ? ಅನಾಮತ್ತು ನೂರು ಕೌರವರು ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇವರಲ್ಲಿ 29 ಜನರನ್ನು ಬಂಧಿಸಲಾಗಿದ್ದು, 70ಕ್ಕೂ ಹೆಚ್ಚು ಕಾಮಪಿಪಾಸುಗಳು ಕರ್ನಾಟಕ ಸೇರಿದಂತೆ ಕೇರಳದ ಸುತ್ತಲಿನ ಎಲ್ಲ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ.

ಕಾಮುಕರನ್ನು ಬಂಧಿಸಲು ಪೊಲೀಸರ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶಕ್ಕೆ ರವಾನಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಆ ಬಾಲೆಯ ನಿರ್ಲಜ್ಜ ಅಪ್ಪನೇ ಆಕೆಯನ್ನು ಲೈಂಗಿಕವಾಗಿ ಹಿಂಸಿಸಿದ್ದಾನೆ ಮತ್ತು ದುರುಳರೊಂದಿಗೆ ಕಾಮಚೆಲ್ಲಾಟವಾಡಲು ಅವಕಾಶ ಮಾಡಿಕೊಟ್ಟಿದ್ದಾನೆ.

ಆ ಹುಡುಗಿ ತನ್ನ ಸಂಬಂಧಿಯೊಂದಿಗೆ ಈ ವಿಷಯವನ್ನು ಬಹಿರಂಗಪಡಿಸದಿದ್ದರೆ, ಆಕೆಯನ್ನು ಬಳಸಿಕೊಳ್ಳುವವರ ಸಂಖ್ಯೆ ಇನ್ನೆಷ್ಟಿರುತ್ತಿತ್ತೋ? ಕೆಲ ಚಿತ್ರಗಳಲ್ಲಿ ನಟಿಸಿರುವ ಆ ಹುಡುಗಿಯ ಅಪ್ಪ, ಅಪ್ಪನಂತೆ ವರ್ತಿಸುವ ಬದಲು ಕಾಮುಕನಂತೆ ವರ್ತಿಸಿದ್ದಾನೆ. ನಂತರ, ಚಿತ್ರೋದ್ಯಮದಲ್ಲಿನ ಹಲವರು ತಮ್ಮ ತೀಟೆ ತೀರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ.

ಎರ್ನಾಕುಲಂ ಜಿಲ್ಲೆಯ ಪರವೂರ್ ಗ್ರಾಮಕ್ಕೆ ಸೇರಿದ ಬಾಲೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲೈಂಗಿಕ ರೋಗಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ರಾಜಕೀಯ ಧುರೀಣರು ಭಾಗಿಯಾಗಿಲ್ಲವೆಂಬುದು ತಿಳಿದುಬಂದಿದೆ. ಆಕೆ ಅನೇಕರ ಹೆಸರನ್ನು ಬಹಿರಂಗಪಡಿಸಿದ್ದಾಳೆ. ಬಂಧಿತರಿಂದ ಉಳಿದವರ ಹೆಸರನ್ನು ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+