ಚೀನಾ ಮೊಬೈಲ್ ಅನಾಹುತ: ದೆಹಲಿಯಲ್ಲಿ ಯುವಕನ ಸಾವು
ಹೊಸದಿಲ್ಲಿ,
ಜೂನ್ 18: ಚೀನಾದ ಅಗ್ಗದ ಬೆಲೆಯ ಮೊಬೈಲ್ ಫೋನ್ ಮತ್ತೆ ಅವಾಂತರ ಮಾಡಿದೆ. ಈ ಬಾರಿ ದೆಹಲಿಯಲ್ಲಿ ಯುವಕನೊಬ್ಬನನ್ನು ಆಹುತಿ ತೆಗೆದುಕೊಂಡಿದೆ. ಮೂಲತಃ ಗುಜರಾತಿನವನಾದ 25ರ ವರ್ಷದ ಧನಾಜಿ ದಾಮೊರ್ ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್ ಆಗುತ್ತಿರುವಾಗಲೇ ಕರೆ ಮಾಡಲು ಹೋಗಿ ಮೃತ್ಯುವನ್ನು ಆಹ್ವಾನಿಸಿಕೊಂಡ ನತದೃಷ್ಟ. id="toptextpromo">ಅಗ್ಗದ
ಫೋನಿನಲ್ಲಿ ಹರಿದ ವಿದ್ಯುತ್‌ನಿಂದಾಗಿ ಮಿದುಳಿಗೆ ಆಘಾತವಾಗಿ ಧನಾಜಿ ಸಾವನ್ನಪ್ಪಿದ್ದಾನೆ. ಸರಕಾರ ಈಗಾಗಲೇ ಭದ್ರತೆಗೆ ಅಪಾಯವಿರುವ ಹಿನ್ನೆಲೆಯಲ್ಲಿ ಚೀನಾದ ಮೊಬೈಲ್ ಫೋನ್ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. id='are-slot-1' class='oiad oi-axt oiadv'> id='top-searched-articles'>ಕಡಿಮೆ
ಬೆಲೆಯ ಈ ಆಕರ್ಷಕ ಫೋನ್‌ಗಳು ಜನರನ್ನು ಹೆಚ್ಚು ಸೆಳೆಯುತ್ತಿದ್ದರೂ, ಸುರಕ್ಷೆತೆಯ ದೃಷ್ಟಿಯಿಂದ ಅವು ಸೂಕ್ತವಲ್ಲ. ಕಳೆದ ವರ್ಷ ಐಎಂಇಐ ನಂಬರ್ ಹೊಂದಿರದ ಚೀನಾದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲು ಸರಕಾರ ಆದೇಶಿಸಿತು ಹಾಗೂ ಐಎಂಇಐ ನಂಬರ್ ಇಲ್ಲದ ಮೊಬೈಲ್‌ಗಳನ್ನು ನಿಷೇಧಿಸಿದೆ. ಇದರ ಹೊರತಾಗಿಯೂ ಕಾಳಸಂತೆ ಮೂಲಕ ಚೀನಾ ಮೊಬೈಲ್ ಭಾರತದ ಮಾರುಕಟ್ಟೆಗೆ ಯಥೇಚ್ಚವಾಗಿ ಹರಿದು ಬರುತ್ತಿದೆ.











Click it and Unblock the Notifications