ವೀಕೆಂಡ್ ಮೂಡಿನಲ್ಲಿ ಕೈಬೀಸಿ ಕರೆಯುತಿದೆ 'ಚಿತ್ರ ಸಂತೆ'
ಬೆಂಗಳೂರು,
ಜೂನ್ 18: ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಸೃಜನಶೀಲ ಮನಸುಗಳದ್ದೇ ಕಾರುಬಾರು. ಇದಕ್ಕೆ ಪೂರಕವಾದ ವಾತಾವರಣ ಅಲ್ಲಿನದು. ಗಿಡ, ಮರ, ಬಂಡೆ, ಹುಲ್ಲಿನ ಹಾಸು, ಮನಸಿಗೆ ಮುದ ನೀಡುವ ಕಲಾಕೃತಿಗಳು. ನಗರದ ಗಜಿಬಿಜಿಯ ನಡುವೆಯೂ ಸದಾ ಮೌನಿ ಅದು. id="toptextpromo">ಆದರೆ,
ಸಿಕೆಪಿಯಲ್ಲೀಗ ಗಿಜಿಗಿಜಿ. ಕೊಳ್ಳುವವರ ಉತ್ಸಾಹ, ಮಾರುವವರ ಆತುರ, ಕೊಂಡು-ಕೊಳ್ಳುವಿಕೆ ನಡುವಿನ ಚೌಕಸಿಯ ತೆಳುವಾದ ಗೆರೆ. ಹೌದು ಇಲ್ಲೀಗ ಚಿತ್ರ ಸಂತೆಯ ಸಂಭ್ರಮ. ಇದು ಮಾಮೂಲಿ ಸಂತೆಯಲ್ಲ. ಇದನ್ನೊಮ್ಮೆ ಸುತ್ತಿದರೆ ಸಿಗುವ ಆನಂದವೇ ಬೇರೆ. id='are-slot-1' class='oiad oi-axt oiadv'> id='top-searched-articles'>ಭಾರತದ
ಅನೇಕ ರಾಜ್ಯಗಳ ದರ್ಶನ ಮಾಡಿಸುತ್ತದೆ ಈ ಸಂತೆ. ಇಲ್ಲಿ ಸುಮಾರು 27 ರಾಜ್ಯಗಳ ಕಲೆಯ ಅನಾವರಣಗೊಂಡಿದೆ. 140ಕ್ಕೂ ಅಧಿಕ ಮಳಿಗೆಗಳಲ್ಲಿ ಇವುಗಳ ಪ್ರದರ್ಶನ ಮತ್ತು ಮಾರಾಟವೂ ಇದೆ. ಸಂಪೂರ್ಣ ಸಂಸ್ಥೆ ಈ ಬಾರಿ ಇದರ ನೇತೃತ್ವ ವಹಿಸಿದೆ. ಈಗಾಗಲೇ ಆರಂಭವಾಗಿರುವ 9ನೇ ವಾರ್ಷಿಕ ಚಿತ್ರ ಸಂತೆ ಜೂನ್ 27ರ ತನಕ ಮುಂದುವರೆಯಲಿದೆ. ಬೆಳಿಗ್ಗೆ 10 ರಿಂದ ರಾತ್ರಿ 8ರ ತನಕ ನಿರಂತರ.











Click it and Unblock the Notifications