ಬೆತ್ತಲೆ ನತಾಲಿಯಾ ಜತೆ ತಿಮಿಂಗಿಲಗಳ ಸರಸ

Natalia Avseenko, Belugas
ಲಂಡನ್‌, ಜೂನ್ 17: ಮೈ ಕೊರೆವ ಚಳಿಯಲ್ಲಿ ಎಷ್ಟು ಮೈಮುಚ್ಚಿಕೊಂಡರೂ ಚಳಿಗೆ ಶಿವ ಶಿವ ಅನ್ನಲೇಬೇಕು. ಹೀಗಿರುವಾಗ ಶೂನ್ಯಕಿಂತ ಕಡಿಮೆ ತಾಪಮಾನವಿರುವ ಆರ್ಟಿಕ ಧ್ರುವದಲ್ಲಿ ಬಟ್ಟೆ ಕಳಚಿ ನೀರಿನಲ್ಲಿ ಮುಳುಗುವುದು ಸಾಧ್ಯವೇ?

;

ಅಸಾಧ್ಯವೆನ್ನಿಸುವ ಈ ಸಾಹಸವೊಂದನ್ನು ಮಹಿಳೆಯೊಬ್ಬರು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ. ಅದರಂತೆ, ಬೆತ್ತಲೆಯಾಗಿದ್ದ ನತಾಲಿಯಾ ಜತೆ ತಿಮಿಂಗಿಲಗಳು ಸ್ನೇಹಯುತವಾಗಿ ವರ್ತಿಸಿ, ಅಚ್ಚರಿ ಮೂಡಿಸಿವೆ.

ವಿಷಯ ಏನೆಂದರೆ, ವಾಯುವ್ಯ ರಷ್ಯಾದ ಉತ್ತರ ತೀರಕ್ಕೆ ಬರುವ ಆರ್ಟಿಕ್‌ ಧ್ರುವ ಪ್ರದೇಶದಲ್ಲಿ ಕಂಡು ಬರುವ ಬೆಲುಗಾಸ್‌ ಎಂಬ ಜಾತಿಯ ತಿಮಿಂಗಿಲಗಳು ಅತ್ಯಂತ ಜನಪ್ರಿಯ. ಮಾನವರ ರೀತಿಯಲ್ಲಿ ಮುಖದಲ್ಲಿ ಭಾವನೆಗಳನ್ನು ತೋರುತ್ತವೆ ಎಂಬುದು ಇವುಗಳ ಹೆಗ್ಗಳಿಕೆ.

;

ಆದರೆ ಯಾವುದೇ ಕೃತಕ ವಸ್ತುಗಳಿಂದ ತಮ್ಮನ್ನು ಮುಟ್ಟುವುದನ್ನು ಈ ತಿಮಿಂಗಿಲಗಳು ಸುತರಾಂ ಇಷ್ಟಪಡುವುದಿಲ್ಲವಂತೆ. ಅಂದರೆ ಡೈವಿಂಗ್‌ ಸೂಟ್‌ ಹಾಕಿಕೊಂಡು ನೀರಿಗಿಳಿದು ಸ್ಪರ್ಶಿಸುವುದನ್ನು ಇವು ಇಷ್ಟ ಪಡುವುದಿಲ್ಲವಂತೆ.

ಹೀಗಾಗಿ ನತಾಲಿಯಾ ಅವ್‌ಸೆನ್ಕೋ ಎಂಬ 36ರ ವರ್ಷದ ಪರಿಣತ ಈಜುಗಾರ್ತಿಯನ್ನು ಬೆತ್ತಲೆಯಾಗಿ ನೀರಿಗೆ ಇಳಿಸಿ ಅವುಗಳನ್ನು ಪಳಗಿಸುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಸಾಮಾನ್ಯವಾಗಿ ಶೂನ್ಯ ತಾಪಮಾನದ ನೀರಿನಲ್ಲಿ ಮುಳುಗಿದರೆ ಯಾವುದೇ ವ್ಯಕ್ತಿ 5 ನಿಮಿಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲ. ಆದರೆ ಯೋಗಪಟುವೂ ಆಗಿರುವ ಈ ಮಹಿಳೆ ಸಂಪೂರ್ಣ ಬೆತ್ತಲಾಗಿ ಸುಮಾರು 10 ನಿಮಿಷ 40 ಸೆಕೆಂಡ್‌ ಮೈಕೊರೆಯುವ ಚಳಿಯಲ್ಲಿ ಇರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+