ವಯಸ್ಸು 25, 50 ಡಾಲರ್ ಗೆ ಬರ್ತೀಯಾ ಅಂತಿದ್ಳು

ಅವತ್ತು ರೀಮಾ ಬಜಾಜ್ ಇದ್ದ ಜಾಗ ಅಂಥದ್ದು, ಶಾಲಾ ಕಟ್ಟಡದಿಂದ ಸಾವಿರ ಅಡಿ ದೂರದಲ್ಲಿ ನಿಂತಿದ್ದ ಈಕೆ ಡೀಲ್ ಕುದುರಿಸುತ್ತಿದ್ದಳು. ಶಾಲೆ ಕಡೆ ಇನ್ನೊಂದು ಕೇಸ್ ಸಲುವಾಗಿ ಬಂದಿದ್ದ DeKalb ಪೊಲೀಸರಿಗೆ ಈಕೆಯ ವರ್ತನೆ ಅನುಮಾನಾಸ್ಪದವಾಗಿ ಕಾಣಿಸಿದೆ. ವಿಚಾರಣೆ ನಡೆಸಿ ನಂತರ ಅಲ್ಲಿದ್ದ ಪುರುಷರ ಹಾಗೂ ರೀಮಾಳ ಇಮೇಲ್ ಸಂದೇಶಗಳನ್ನು ಓದಿ, ರೀಮಾಳನ್ನು ವೇಶ್ಯಾವಾಟಿಕೆ ಕೇಸ್ ನಲ್ಲಿ ಬುಕ್ ಮಾಡಿ ಜೈಲಿಗೆ ತಳ್ಳಿದ್ದರು.
500 USD ದಂಡ ಕಟ್ಟಿ ಜಾಮೀನಿನ ಮೇಲೆ ಹೊರಬಿದ್ದ ರೀಮಾ, ಈ ಪ್ರಕರಣ ನನಗೆ ಒಂದು ಪ್ರಾಕ್ಟಿಕಲ್ ಅನುಭವ ನೀಡಿದೆ. ನನ್ನ ಕ್ಲೈಂಟ್ ಗಳ ಸಮಸ್ಯೆಗಳನ್ನು ಅರಿತುಕೊಳ್ಳಲು ಸಹಾಯಕವಾಗಲಿದೆ ಎಂದು ತನ್ನ ವೆಬ್ ಪುಟದಲ್ಲಿ ಬರೆದುಕೊಂಡಿದ್ದರು.
2010ರಲ್ಲಿ ಉತ್ತರ ಇಲಿನಾಯ್ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದ ಬಜಾಜ್, ಮೇಲಿನ ಘಟನೆ ನಡೆದಾಗ ಅಟಾರ್ನಿಯಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಿಕಮೋರ್ ನಲ್ಲಿ ಆಕೆಯ ಕಚೇರಿ ಇದ್ದು, ಆಕೆಯ ಅಧಿಕೃತ ವೆಬ್ ಸೈಟ್ ಸದ್ಯಕ್ಕೆ ಬಂದ್ ಆಗಿದೆ.












Click it and Unblock the Notifications