1 ಮಾರ್ಕ್ಸ್ ಗೆ 1 ಲಕ್ಷ ರೂ ಲಂಚ; ನೀವೂ ಡಾಕ್ಟರ್ ಆಗಿರಿ!

ನೀವು ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು ಹಣ ಕೊಟ್ಟು ಮಾರ್ಕ್ಸು ತೆಗೆದುಕೊಳ್ಳಲು ಸಿದ್ಧವಾಗಿದ್ದರೆ ನಿಮ್ಮೊಂದಿಗೆ ಕೈಜೋಡಿಸಿಲು ಮೌಲ್ಯಮಾಪಕರೂ ಸನ್ನದ್ಧರಾಗಿರುತ್ತಾರೆ. ಇದು ರೀಟೋಟಲಿಂಗ್ ಹಂತದಲ್ಲಿ ನಡೆಯುವ ದಂಧೆ.
ನಿಲ್ಲ ... ಹಣದ ಥೈಲಿಯೊಂದಿಗೆ ರೀಟೋಟಲಿಂಗ್ ಗೆ ಮೊರೆ ಹೋಗಿ. ಜತೆಗೆ ಮೌಲ್ಯಮಾಪಕರನ್ನೂ ಬುಕ್ ಮಾಡಿಕೊಳ್ಳಿ. ಅವರು ಒಂದೊಂದು ಅಂಕಕ್ಕೆ ಇಷ್ಟಿಷ್ಟು ಎಂದು ಫಿಕ್ಸ್ ಮಾಡುತ್ತಾರೆ. ನೀವು ಸಮ್ಮತಿ ನೀಡಿದರೆ ...ಮುಂದಿನದೆಲ್ಲ ಸಲೀಸು.
ಅನೇಕ ವಿದ್ಯಾರ್ಥಿಗಳು ಹೀಗೆಯೇ ಒಂದೊಂದು ಅಂಕ ಗಳಿಸಿ ಎಂಬಿಬಿಎಸ್ ಪಾಸು ಮಾಡುತ್ತಿದ್ದಾರೆ. 2006 ರಿಂದ ಒಟ್ಟು ಏಳು ಕಾಲೇಜುಗಳಲ್ಲಿ ಇಂತಹ ಅಕ್ರಮಗಳು ನಡೆದಿವೆ ಎನ್ನುತ್ತದೆ ಪೊಲೀಸ್ ವರದಿ. ಇಂತಹ 18 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಈ ರೀತಿ ಎಂಬಿಬಿಎಸ್ ಪಾಸು ಮಾಡಿರುವ ವಿದ್ಯಾರ್ಥಿಗಳು ನಿಮ್ಮ ಮಧ್ಯೆ ಈಗಾಗಲೇ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹುಷಾರು!
ಬೆಂಗಳೂರಿನ ಅಲ್ ಅಮೀನ್ ಮೆಡಿಕಲ್ ಕಾಲೇಜು, ತುಮಕೂರು, ಚಿತ್ರದುರ್ಗ ಮತ್ತು ಗುಲ್ಬರ್ಗಾದ ಮೆಡಿಕಲ್ ಕಾಲೇಜುಗಳು ಇಂತಹ ದಂಧೆಗೆ ನೀರೆರೆಯುತ್ತಿವೆ ಎನ್ನಲಾಗಿದೆ. ಆರೋಪ ಸಾಬೀತಾದರೆ ಇವರ ಎಂಬಿಬಿಎಸ್ ಸರ್ಟಿಫಿಕೇಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎ. ಆರ್. ರಾಮದಾಸ್ ಅವರು ಹೈಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.











Click it and Unblock the Notifications