ಬಾಲಿವುಡ್ ಸ್ಟೈಲ್ ನಲ್ಲಿ ಕ್ಯಾ.ಗೋಪಿನಾಥ್ ಮಗಳ ಮದುವೆ

ಪಲ್ಲವಿ ಗೆಳತಿಯರು ಹಾಗೂ ಕುಟುಂಬದವರು ಪಲ್ಲವಿ ಹಾಗೂ ಆಕೆ ಫ್ರೆಂಚ್ ಮೂಲದ ಭಾವಿ ಪತಿ ಪ್ರೇಮ ಕಥೆಯನ್ನು ರೂಪಕದ ರೀತಿ ಹೆಣೆದು ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ. ಹಾಡು, ನೃತ್ಯ ಎಲ್ಲವೂ ಬಾಲಿವುಡ್ ಸ್ಟೈಲ್ ನಲ್ಲಿರಲಿದೆ. ಪ್ರೇಮಕಥೆಗೆ ಹಾಡುಗಳನ್ನು ಹೊಸೆದು, ನಾಟ್ಯವನ್ನು ಸೇರಿಸಿ ಅಕ್ಕ, ಭಾವನ ಮದುವೆಯನ್ನು ಸಂಭ್ರಮದಿಂದ ಆಚರಿಸಲು ಪಲ್ಲವಿ ತಂಗಿ ಕೃತ್ತಿಕಾ ತಯಾರಿ ನಡೆಸಿದ್ದಾರೆ.
ಪಲ್ಲವಿಯ ಆತ್ಮೀಯ ಗೆಳತಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಳ ಗೆಳತಿ ರಫೆಲ್ ಕೂಡಾ ಈ ರೂಪಕದಲ್ಲಿ ಮುಖ್ಯಪಾತ್ರವಹಿಸಲಿದ್ದಾರಂತೆ. ರಮ್ಯಾರಿಂದ ಕೂಡಾ ಸಂಭ್ರಮದಲ್ಲಿ ಪಾಲ್ಗೊಂಡು ನರ್ತಿಸಲಿದ್ದಾರೆ. ಮದುವೆಗೆ ಮುಂಚಿನ ನಾಂದಿ, ಸಂಗೀತ ಕಾರ್ಯಕ್ರಮ ಎಲ್ಲವೂ ಜುಲೈನಲ್ಲಿ ನಡೆಯಲಿದ್ದು, ಮದುವೆ ಆಗಸ್ಟ್ ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿದೆ ಎನ್ನಲಾಗಿದೆ.
ಕ್ಯಾ. ಗೋಪಿನಾಥ್ ಅವರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ ಗಣ್ಯಾತಿಗಣ್ಯರು ತಮ್ಮ ಕಾರ್ಯಕ್ರಮ ಪಟ್ಟಿ ನೋಡಿಕೊಂಡು ಸಮಯ ಹೊಂದಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಗೊರೂರು ಗೋಪಿನಾಥರ ಮಗಳ ಮದುವೆ ಹಾಸನ ಅಯ್ಯಂಗಾರ್ ಸಂಪ್ರದಾಯದಂತೆ ನಡೆಯುವುದೋ ಅಥವಾ ಮಾರ್ಡನ್ ಸ್ಟೈಲ್ ನಲ್ಲಿ ನಡೆಯುವುದೋ ವಿವರಗಳಿಗೆ ನಿರೀಕ್ಷಿಸಿ.












Click it and Unblock the Notifications