ಸುಪಾರಿ ಸಂಸ್ಕೃತಿ ಜೆಡಿಎಸ್ ಪಕ್ಷದ್ದು : ಡಿಕೆಶಿ ಗುಡುಗು

ಕನಕಪುರ ಅಧಿಕಾರಿಗಳು ಕುಮಾರಸ್ವಾಮಿ ಅಧೀನದಲ್ಲಿದ್ದಾರೆ. ನನ್ನ ಸೋದರ ಡಿ.ಕೆ. ಸುರೇಶ್ ಹತ್ಯೆಗೆ ಕನಕಪುರದ ಜೆಡಿಎಸ್ ಮುಖಂಡ ಬಾಲನರಸಿಂಹೇಗೌಡ ಮೂಲಕ ಕುಮಾರಸ್ವಾಮಿಯೇ ಸುಪಾರಿ ನೀಡಿದ್ದಾರೆ. ಆರೋಪಿ ಬಾಲನರಸಿಂಹೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ತಾವೆಂದೂ ಸುಪಾರಿ ನೀಡಿದವರಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.
ಕನಕಪುರದಲ್ಲಿ ನನ್ನಿಂದ ರಾಜಕೀಯ ಹಗೆತನದಿಂದಾಗಿ ಹತ್ಯೆಗಳಾಗಿದ್ದರೆ ಜೆಡಿಎಸ್ ನೇತಾರ ಎಚ್. ಡಿ. ಕುಮಾರಸ್ವಾಮಿ ಅದನ್ನು ಸಾಬೀತುಪಡಿಸಲಿ. ಆಗ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ಸನ್ಯಾಸ ಪಡೆಯುವೆ. ಇಲ್ಲವಾದರೆ ಕುಮಾರಸ್ವಾಮಿಯೇ ಸನ್ಯಾಸತ್ವ ಪಡೆಯಲಿ ಎಂದು ಡಿಕೆಶಿ ಸವಾಲು ಹಾಕಿದರು.
ಘಟನೆ ಹಿನ್ನಲೆ: ಡಿ.ಕೆ.ಶಿ ಅವರ ತಮ್ಮ ಡಿ.ಕೆ. ಸುರೇಶ್ ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ನಾಲ್ವರನ್ನ ಕೋಡಿಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದರು. ಬಾಲನರಸಿಂಹೇಗೌಡ, ಕಾಳೇಗೌಡ, ಚಿಕ್ಕರಾಜು ಮತು ಲಕ್ಷ್ಮಣ್ ಅಲಿಯಾಸ್ ಹರೀಶ್ ಬಂಧಿತರು. ಸುರೇಶ್ ಹತ್ಯೆಗೆ ಬಾಲನರಸಿಂಹೇಗೌಡ ಸಂಚು ರೂಪಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಕೋಡಿಹಳ್ಳಿ ಪೊಲೀಸರು, ತಾಲೂಕಿನ ಹೇರೋಂಪ್ಪನ ಹಳ್ಳಿಯಲ್ಲಿದ್ದ ಬಾಲನರಸಿಂಹೇಗೌಡ, ಚಿಕ್ಕರಾಜು ಮತ್ತು ಕಾಳೇಗೌಡರನ್ನು ಕಳೆದ ವಾರ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications