ಪೊಲೀಸರು ಕಾಮಮೃಗವಾಗಿ ಅಪ್ರಾಪ್ತೆಯನ್ನು ಕೊಂದರು
ಖೇರಿ,
(ಉತ್ತರ ಪ್ರದೇಶ) ಜೂ 12: ಕಾಮಪಿಪಾಸು ಆರಕ್ಷರ ದಾಳಿಗೆ ಅಪ್ರಾಪ್ತೆಯೊಬ್ಬಳು ಬಲಿಯಾಗಿದ್ದಾಳೆ. ನಿಗ್ ಹಸನ್ ಠಾಣೆಯಲ್ಲಿದ್ದ ಎಲ್ಲ ಪೊಲೀಸರು ಆಕೆಯ ಮೇಲೆ ಮೃಗದ ರೀತಿಯಲ್ಲಿ ವರ್ತಿಸಿ ಬಲಾತ್ಕಾರ ಮಾಡಿದ್ದಾರೆ. ಇದರಿಂದ 14 ವರ್ಷದ ಹುಡುಗಿ ಠಾಣೆ ಆವರಣದಲ್ಲೇ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಪೊಲೀಸ್ ಠಾಣೆಯ ಎಲ್ಲಾ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. id="toptextpromo">ಆದರೆ
ಇದು ಆತ್ಮಹತ್ಯೆಯಲ್ಲ. ಕೊಲೆ, ನಮ್ಮ ಮಗಳನ್ನು ಸಾಮೂಹಿಕವಾಗಿ ಅನುಭವಿಸಿದ ಈ ದುಷ್ಟರು ಆಕೆಯನ್ನು ಕೊಂದು ಆತ್ಮಹತ್ಯೆ ಎಂದು ನಾಟಕವಾಡಿದ್ದಾರೆ ಎಂದು ಮೃತಳ ಪೋಷಕರು ದೂರಿದ್ದಾರೆ. ಛೇ ಎಲ್ಲಿಯಾದರೂ ಉಂಟೆ, ಆ ಹುಡುಗಿ ದನ ಮೇಯಿಸಲು ಹೋದವಳು ಕಾಣೆಯಾಗಿದ್ದಳು ಆಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಎಂದು ಪೊಲೀಸರು ಹೇಳುತ್ತಾರೆ. id='are-slot-1' class='oiad oi-axt oiadv'> id='top-searched-articles'>ಈ
ಸಾಮೂಹಿಕ ಕಾಮಕಾಂಡದಲ್ಲಿ SHO, ಇಬ್ಬರು ಎಸ್ ಐಗಳು ಹಾಗೂ ಏಳು ಜನ ಕಾನ್ಸ್ ಸ್ಟೇಬಲ್ ಗಳು ಸೇರಿಕೊಂಡಿದ್ದು, ಈಗ ಎಲ್ಲರನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ಹುಡುಗಿ ಸಾವಿನ ಹಿಂದಿನ ರಹಸ್ಯ ಇನ್ನೂ ಸರಿಯಾಗಿ ಬಹಿರಂಗಗೊಂಡಿಲ್ಲ.











Click it and Unblock the Notifications