• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಮಗಳೂರಿನಲ್ಲಿ ಇಂಗ್ಲಿಷ್ ಪ್ರೇಮಕ್ಕೆ ಕನ್ನಡ ಶಾಲೆ ಬಲಿ

By Prasad
|
ಚಿಕ್ಕಮಗಳೂರು, ಜೂ. 11 : ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಬೇಕೆಂಬ ಹುಚ್ಚು ಕನ್ನಡ ಶಾಲೆಗಳಿಗೆ ಎರವಾಗುತ್ತಿದೆ. ಇದು ಇಂಗ್ಲಿಷ್ ಸಂಸ್ಕೃತಿಯನ್ನು ಬೆನ್ನತ್ತಿರುವ ಬೆಂಗಳೂರಿನ ಕಥೆಯಲ್ಲ. ಪ್ರಕೃತಿ ಸೌಂದರ್ಯವನ್ನು ಮೈದುಂಬಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಕಥೆ.

ಕಳೆದ ನಾಲ್ಕು ವರ್ಷಗಳಲ್ಲಿ ಏನಿಲ್ಲೆಂದರೂ 100 ಕನ್ನಡ ಪ್ರಾಥಮಿಕ ಶಾಲೆಗಳು ಕದಕ್ಕೆ ಬೀಗ ಜಡಿದಿವೆ. ಇದು ಪಾಲಕರ ಆಂಗ್ಲ ಪ್ರೀತಿಯ ಮಹಾತ್ಮೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾಧಿಕಾರಿಯಾಗಿರುವ ರಂಗಪ್ಪ ಅವರ ಪ್ರಕಾರ, ಈ ವರ್ಷ ಕಣ್ಣು ಮುಚ್ಚುತ್ತಿರುವ ಕನ್ನಡ ಶಾಲೆಗಳ ಸಂಖ್ಯೆ ಇನ್ನೂ ಹೆಚ್ಚಲಿದೆ.

ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಐದಕ್ಕಿಂತ ಕಡಿಮೆ ಇದ್ದರಿಂದ ಶಾಲೆಗಳನ್ನು ಮುಚ್ಚದೆ ಬೇರೆ ವಿಧಿಯಿರಲಿಲ್ಲ. ಆ ಮಕ್ಕಳನ್ನು ಹತ್ತಿರದ ಶಾಲೆಗೆ ಸೇರಿಸಲಾಗಿದೆ ಎಂದು ಜಿಲ್ಲಾಡಳಿತ ಸರಕಾರಕ್ಕೆ ತನ್ನ ವರದಿಯನ್ನು ಒಪ್ಪಿಸಿದೆ.

ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ ನೀಡಿದರಷ್ಟೆ ಸಾಲದು, ಪಾಲಕರ ಸಹಕಾರವೂ ಬೇಕಾಗುತ್ತದೆ. ಆದರೆ, ತಂದೆ ತಾಯಂದಿರೇ ಮಕ್ಕಳಿಗೆ ಕನ್ನಡ ಶಾಲೆ ಬೇಡ ಎಂದು ತೀರ್ಮಾನಿಸಿದರೆ ಏನು ಮಾಡಲು ಸಾಧ್ಯ ಎಂದು ರಂಗಪ್ಪ ಪ್ರಶ್ನಿಸುತ್ತಾರೆ.

ಇಂಗ್ಲಿಷ್ ಮಾಧ್ಯಮದ ಗಾಳಿ ಅಷ್ಟಾಗಿ ಇಲ್ಲದಿದ್ದ ಚಿಕ್ಕಮಗಳೂರಿನಲ್ಲೂ ಆಂಗ್ಲ ಪ್ರೇಮದ ಗಾಳಿ ಬೀಸಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಸಿಗಬೇಕು ಎಂದು ಹೋರಾಡುತ್ತಿರುವ ಹೊತ್ತಿನಲ್ಲಿ ಕನ್ನಡ ಶಾಲೆಗಳೇ ಅವಸಾನದ ಅಂಚಿಗೆ ಬಂದು ನಿಂತಿರುವುದು ಕನ್ನಡದ ದೌರ್ಭಾಗ್ಯವಲ್ಲದೆ ಮತ್ತೇನೂ ಅಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Parents preference to english medium schools forcing Kannada medium primary schools to close in Chikmagalur district. Deputy director of primary instructions Rangappa says, just giving free books, uniforms and mid-day meals to the students is not enough to hold them to learn in Kannada medium schools. So, what action the govt should take?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more