ಗೂಗಲ್ ಕಮಾಲ್, ಸಚಿನ್ ಜೊತೆ ರೈನಾ ಕೂಡಾ ಗಾಡ್

ರೈನಾ ಬದಲಿಗೆ ಸಚಿನ್ ಗಾಡ್ ಆಗಿರುವುದು ತಪ್ಪೇನಿಲ್ಲ. ಆದರೆ, ಗೂಗಲ್ ಪಾಲಿಗೆ ಇನ್ನೂ ಕನ್ ಫ್ಯೂಷನ್ ಕಮ್ಮಿಯಾಗಿಲ್ಲ. ಇದು ಪ್ರಮಾದವೋ ಅಥವಾ ಸಾಫ್ಟ್ ವೇರ್ ಬಗ್ ಬಡಿದಿದೆಯೋ ಇನ್ನು ಸ್ಪಷ್ಟವಾಗಿಲ್ಲ. ಗೂಗಲ್ ಯಾರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದೆ ಎಂದರೆ ನಂಬಲಾಗುವುದಿಲ್ಲ. ಆದರೆ, ಇದು ಪ್ರಾಕ್ಟಿಕಲ್ ಜೋಕ್ ಆಗಿ ಗೂಗಲ್ ಟ್ರೆಂಡ್ ನಲ್ಲಿ ಟಾಪ್ ಸ್ಥಾನಕ್ಕೇರುತ್ತಿದೆ.
ಸುರೇಶ್ ಸಚಿನ್ ಆಗಲು ಹೇಗೆ ಸಾಧ್ಯ?
* www.translate.google.com ಗೆ ಭೇಟಿ ಕೊಡಿ
*"Suresh Raina is God" ಎಂದು ಟೈಪ್ ಮಾಡಿ
*Serbian ಭಾಷೆಗೆ ಭಾಷಾಂತರಿಸಲು ಸೂಚಿಸಿ
*ಬಂದ ಉತ್ತರವನ್ನು(ಸೆರ್ಬಿಯನ್ ಭಾಷೆಯ ಪದವನ್ನು) ಕಾಪಿ ಮಾಡಿಕೊಂಡು ಇಂಗ್ಲೀಷ್ ಭಾಷೆಗೆ ಅನುವಾದಿಸಿ
* ಫಲಿತಾಂಶ "Sachin Tendulkar is God" ಎಂದು ಬರುವುದೇ ನೋಡಿ
ಇಲ್ಲಿವರೆಗೂ ಇದು ಹಾಗೆ ಮುಂದುವರೆದಿದೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂಬುದರಲ್ಲಿ ಎರಡು ಮಾತಿಲ್ಲ. ಸುಮಾರು 22 ವರ್ಷಗಳ ಕಾಲದ ಕ್ರಿಕೆಟ್ ಜೀವನದಲ್ಲಿ 99 ಶತಕಗಳನ್ನು ಸಿಡಿಸಿ, 32 ಸಾವಿರ ರನ್ ಗಳಿಸಿರುವುದು ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ. ಆದರೆ, ಗೂಗಲ್ ಈ ಕನ್ ಫ್ಯೂಷನ್ ಗೆ ಉತ್ತರ ಯಾರ ಬಳಿ ಇದೆ?












Click it and Unblock the Notifications