ಕೇಳ್ರಪ್ಪೊ ಕೇಳಿ ತೈವಾನಿನಲ್ಲಿ ಲಂಚ ನೀಡಿದರೆ ಶಿಕ್ಷೆ ಗ್ಯಾರಂಟಿ

ತೈವಾನಿನಲ್ಲಿ ಇತ್ತೀಚೆಗೆ ಏನಾಗಿತ್ತೆಂದರೆ ಉನ್ನತ ಮಟ್ಟದಲ್ಲಿ ಭಾರಿ ಲಂಚ ಹಗರಣಗಳು ನಡೆಯುತ್ತಿದ್ದವು. ಆದ್ದರಿಂದ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಂಚ ನೀಡುವುದನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಲಂಚ ನೀಡಿದರೆ ಗರಿಷ್ಠ ಮೂರು ವರ್ಷ ಜೈಲು ವಾಸ ಮತ್ತು 5 ಲಕ್ಷ ತೈವಾನ್ ಡಾಲರ್ (ಸುಮಾರು 8 ಲಕ್ಷ ರುಪಾಯಿ) ದಂಡ ವಿಧಿಸಲಾಗುತ್ತದೆ ಎಂದು ನ್ಯಾಯಾಂಗ ಸಚಿವಾಲಯ ತಿಳಿಸಿದೆ.
ಈ ನಿಟ್ಟಿನಲ್ಲಿ ಮಂಗಳವಾರ (ಜೂನ್ 7) ಸಂಸತ್ತಿನಲ್ಲಿ ಮಸೂದೆಯೊಂದನ್ನು ಮೊದಲ ಬಾರಿಗೆ ಅಂಗೀಕರಿಸಲಾಗಿದೆ. ಇದರನ್ವಯ ವ್ಯಕ್ತಿಗಳು ಹಣ, ಪದಾರ್ಥ ಅಥವಾ ಲೈಂಗಿಕ ಸೇವೆಯಂತಹ ಯಾವುದೇ ಅಮಿಷಗಳನ್ನು ಸರ್ಕಾರಿ ನೌಕರರಿಗೆ ನೀಡುವುದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.
ಹಣವನ್ನು ಲಕೋಟೆಯಲ್ಲಿ ಹಾಕಿಕೊಡುವುದನ್ನು ಇಲ್ಲಿ ಕೆಂಪು ಲಕೋಟೆ ಸಂಸ್ಕೃತಿ ಎಂದು ಹೇಳಲಾಗುತ್ತದೆ. ಬಹಳ ಕಾಲದಿಂದ ಜಾರಿಯಲ್ಲಿದ್ದ ಕೆಂಪು ಲಕೋಟೆ ಸಂಸ್ಕೃತಿ' ಯನ್ನು ನೂತನ ಕಾನೂನಿನಿಂದ ನಿರ್ಮೂಲನ ಮಾಡಿದಂತಾಗುತ್ತದೆ. ಲಂಚ ಪಡೆದವರಿಗೆ ಶಿಕ್ಷೆಯಾಗುತ್ತಿದ್ದು ಅದನ್ನು ನೀಡಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದುದ್ದನ್ನು ಸರಿಪಡಿಸಿದಂತಾಗುತ್ತದೆ ಎಂದು ನ್ಯಾಯಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications