ಬಾಬಾಗಿರಿಗೆ ಕರ್ನಾಟಕದ ಪುತ್ತೂರಲ್ಲಿ ಸ್ಕೆಚ್: ಚಿದಂಬರಂ

ರಾಮದೇವ್ ನಡೆಸುತ್ತಿರುವುದು ಆರ್ಎಸ್‌ಎಸ್ ಹಾಗೂ ಅದರ ಮುಂಚೂಣಿ ಸಂಘಟನೆಗಳ ಬೆಂಬಲವುಳ್ಳ ರಾಜಕೀಯ ಚಳವಳಿ ಎಂದೂ ಅವರು ಹರಿಹಾಯ್ದಿದ್ದಾರೆ.
'ರಾಮದೇವ್ ಹೋರಾಟದ ಹಿಂದೆ ಯಾರಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಆರ್ಎಸ್‌ಎಸ್‌ನ ಪರಮೋಚ್ಚ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆ ಕಳೆದ ಮಾರ್ಚ್‌ನಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದಿತ್ತು.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾವುದೇ ಸಂಘಟನೆಗಾಗಲೀ, ವ್ಯಕ್ತಿಗಳಿಗಾಗಲೀ ಬೆಂಬಲ ನೀಡಲು ಆ ಸಭೆ ನಿರ್ಧರಿಸಿತ್ತು. ಇದಾದ ಬಳಿಕ ಏಪ್ರಿಲ್ 2ರಂದು ಆರ್ಎಸ್‌ಎಸ್ ಭ್ರಷ್ಟಾಚಾರ ನಿಗ್ರಹ ದಳ ರಚಿಸಿತು. ಅದಕ್ಕೆ ಪೋಷಕರಾಗಿದ್ದವರು ಇದೇ ರಾಮದೇವ್' ಎಂದು ಸಂದರ್ಶನವೊಂದರಲ್ಲಿ ಚಿದಂಬರಂ ತಿಳಿಸಿದ್ದಾರೆ. ಆರ್ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮೇ 12ರಂದು 'ಭ್ರಷ್ಟಾಚಾರದ ವಿರುದ್ಧ ಯುವ ಜನತೆ' ಎಂಬ ಸಂಘಟನೆ ಹುಟ್ಟುಹಾಕಿತು. ಅಲ್ಲದೆ ತಾವು ರಾಮದೇವ್ ಜತೆ ಸಮನ್ವಯ ಸಾಧಿಸಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿತ್ತು ಎಂದು ಹೇಳಿದ್ದಾರೆ.
ಆರ್ಎಸ್‌ಎಸ್ ಹಾಗೂ ಎಬಿವಿಪಿಗೆ ಸೇರಿದ ಎಲ್ಲ ಜನರೂ ಸಂಪೂರ್ಣವಾಗಿ, ನಿಕಟವಾಗಿ ರಾಮದೇವ್ ಜತೆ ಕೆಲಸ ಮಾಡುತ್ತಿದ್ದಾರೆ ಎಂದು ಮೇ 28ರಂದು ವಿಎಚ್‌ಪಿ ನಾಯಕ ಅಶೋಕ್ ಸಿಂಘಲ್ ಕೂಡ ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಈ ಯೋಗ ಶಿಕ್ಷಕ ಅಥವಾ ಯೋಗ ಗುರು ನಡೆಸುತ್ತಿರುವುದು ಚಳವಳಿಯಲ್ಲ. ಆರ್ಎಸ್‌ಎಸ್ ಹಾಗೂ ಅದರ ಮುಂಚೂಣಿ ಸಂಘಟನೆಗಳ ಬೆಂಬಲವುಳ್ಳ ರಾಜಕೀಯ ಹೋರಾಟ. ಸರ್ಕಾರ ಶಾಂತಿಯುತ ಹೋರಾಟಕ್ಕೆ ಅನುಮತಿ ನೀಡಲಿದೆ. ಆದರೆ ದಳ್ಳುರಿಗೆ ಕಾರಣವಾಗುವ ಚಳವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications