ತಮ್ಮನ ಹೆಂಡತಿ ಜತೆ 8 ವರ್ಷ ಕಾಲ್ಚೆಂಡು ಆಡಿದ ರಿಯಾನ್

ರಿಯಾನ್, ಮಾಜಿ ವೇಲ್ಸ್ ಸುಂದರಿ ಇಮೋಜೆನ್ ಥಾಮಸ್ ಜೊತೆ ವಿವಾಹೇತರ ಸಂಬಂಧ ಹೊಂದಿರುವ ಪ್ರಕರಣ ಕಳೆದ ವಾರ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ರಿಯಾನ್ ತನ್ನ ಹೆಂಡತಿ ಸ್ಟೇಸಿಗೆ ಮಾತ್ರವಲ್ಲದೆ ನನಗೂ ಮೋಸ ಮಾಡಿರುವುದಾಗಿ ಅವರ ತಮ್ಮ ರೋಡ್ರಿ ಗಿಗ್ಸ್ ಅವರ ಹೆಂಡತಿ ನಟಾಶಾ ಪತ್ರಿಕಾ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
ನಟಾಶಾ ಅವರು ರೋಡ್ರಿಯನ್ನು ವಿವಾಹವಾಗುವ ಮುನ್ನವೇ ಅಂದರೆ 2003ರಿಂದಲೇ ರಿಯಾನ್ ಗಿಗ್ಸ್ ಜೊತೆ ಪ್ರಣಯ ಸಂಬಂಧ ಹೊಂದಿದ್ದರು. ಇಬ್ಬರೂಮ್ಯಾಂಚೆಸ್ಟರ್ ನೈಟ್‌ಕ್ಲಬ್ ಒಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಪತ್ನಿ ಹೆರಿಗೆಗೆ ತೆರಳಿದ ಸಂದರ್ಭದಲ್ಲೂ ರಿಯಾನ್ ನನ್ನೊಂದಿಗಿದ್ದರು ಎಂದು ನಟಾಶಾ ಹೇಳಿದ್ದಾರೆ.
ಅದಾಗಲೇ ವಿವಾಹಿತರಾಗಿದ್ದ ರಿಯಾನ್ ಕೆಲವು ಕಾಲದ ಒಡನಾಟದ ಬಳಿಕ ನಟಾಶಾ ಅವರಿಂದ ದೂರವಾಗಿದ್ದರು. ಆಗ ನಟಾಶಾ ರಿಯಾನ್ ಅವರ ಸೋದರ ರೋಡ್ರಿ ಅವರನ್ನು ವಿವಾಹವಾಗಿದ್ದರು. ಆದರೂ ತಕ್ಷಣವೇ ರಿಯಾನ್ ಮತ್ತೆ ನಟಾಶಾ ಸಂಪರ್ಕಕ್ಕೆ ಬಂದಿದ್ದರು.
'ನಾನು ಮಾಡುತ್ತಿರುವುದು ತಪ್ಪೆಂದು ನನಗೆ ತಿಳಿದಿತ್ತು. ಇದೊಂದು ಅತ್ಯಂತ ಹೇಯ ಕೃತ್ಯ. ರಿಯಾನ್ ಜೊತೆ ಸಂಬಂಧ ಕೊನೆಗೊಳಿಸಲು ನಾನು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನನಗೆ ಅದೊಂದು ವ್ಯಸನದಂತಿತ್ತು. ರಿಯಾನ್ ಏನು ಹೇಳಿದರೂ ನಾನು ಅದಕ್ಕೆ ತಲೆಬಾಗುತ್ತಿದ್ದೆ. ಆದರೆ ಆತ ಯಾವತ್ತೂ ನನ್ನೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಲಿಲ್ಲ. ಆತನಿಗೆ ಬೇಕಾಗಿದ್ದುದು ಸೆಕ್ಸ್ ಮಾತ್ರ' ಎಂದು ನಟಾಶಾ ಹೇಳಿದ್ದಾರೆ.












Click it and Unblock the Notifications