ಐಪ್ಯಾಡ್ ಖರೀದಿಗಾಗಿ ಕಿಡ್ನಿ ಮಾರಿದ ಚೀನಾ ಹುಡುಗ
ಬೀಜಿಂಗ್,
ಜೂನ್ 3: ಇಲ್ಲಿನ ಅನ್ಹುಯಿ ಪ್ರಾಂತ್ಯದ ಹುಡುಗನೊಬ್ಬ ನೂತನ iPad 2 ಖರೀದಿಸುವ ಸಲುವಾಗಿ ತನ್ನ ಕಿಡ್ನಿಯೊಂದನ್ನು ಮಾರಾಟ ಮಾಡಿದ್ದಾನೆ. id="toptextpromo">17
ವರ್ಷದ ಕ್ಸಿಯಾ ಜೆಂಗ್ ಹೊಚ್ಚ ಹೊಸ ಐಪ್ಯಾಡ್ ಖರೀದಿಸುವ ಬಗ್ಗೆ ಕನಸು ಕಾಣುತ್ತಿದ್ದ. ಆದರೆ ಅದರ ಬೆಲೆ ಇವನ ಕೈಗೆ ಎಟುಕುವಂತಹದ್ದಾಗಿರಲಿಲ್ಲ. ಆದರೆ ಐಪ್ಯಾಡ್ ಆಸೆಯನ್ನು ಬಿಡದ ಜೆಂಗ್ ಅಂತರ್ಜಾಲದ ಮೂಲಕ ಏಜೆಂಟ್ ಒಬ್ಬನನ್ನು ಕಿಡ್ನಿ ಮಾರಾಟದ ವಿಷಯವಾಗಿ ಪತ್ತೆಹಚ್ಚಿದ. ಮಾತುಕತೆ ಬಳಿಕ ಮಧ್ಯ ಚೀನಾದಲ್ಲಿರುವ ಹುನಾನ್ ಪ್ರಾಂತ್ಯಕ್ಕೆ ತೆರಳಿದ ಯುವಕ ಅಲ್ಲಿನ ಆಸ್ಪತ್ರೆಯೊಂದರಲ್ಲಿ ತನ್ನ ಬಲ ಕಿಡ್ನಿಯನ್ನು ತೆಗೆಸಿಕೊಂಡ. id='are-slot-1' class='oiad oi-axt oiadv'> id='top-searched-articles'>22,000
ಯೆನ್ ($3,900) ಹಣ ಪಡೆದು ಮನೆಗೆ ಮರಳುವ ಮೊದಲು ಸೀದಾ ಅಂಗಡಿಗೆ ಹೋಗಿ ಐಪ್ಯಾಡ್ 2 ಮತ್ತು ಐಫೋನ್ ಖರೀದಿಸಿದ. ತನ್ನ ಜೀವಮಾನದ ಆಸೆ ಪೂರೈಸಿತೆಂದು ಬೀಗುತ್ತಾ ಮನೆಯತ್ತ ಹೆಜ್ಜೆ ಹಾಕಿದ. ಆದರೆ ಗಮನಿಸಿ, ಐಪ್ಯಾಡ್ ಖರೀದಿಗಾಗಿ ಕಿಡ್ನಿ ತೆಗೆಸಿಕೊಳ್ಳುತ್ತೇನೆ ಎಂದು ಕ್ಸಿಯಾ ಜೆಂಗ್ ತನ್ನ ಅಪ್ಪ-ಅಮ್ಮನಿಗೆ ಹೇಳಲಿಲ್ಲ. ಅವ ಕುಂಟುತ್ತಾ ಮನೆಗೆ ಬಂದಾಗಲೇ ವಿಷಯ ಗುತ್ತಾಗಿದ್ದು ಎಂದು ಜೆಂಗ್ ತಾಯಿ ಹೇಳಿದ್ದಾರೆ.











Click it and Unblock the Notifications