ಕಕ್ಷಿದಾರಳನ್ನೇ 2 ವರ್ಷ ಅತ್ಯಾಚಾರ ಮಾಡಿದ ಮುದುಕ ವಕೀಲ

ಮಹಿಳೆ(33)ಯೊಬ್ಬಳು 7 ವರ್ಷದ ಹಿಂದೆ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಳು. ಅದರ ವಿಚಾರಣೆಗಾಗಿ ಹಿರಿಯ ವಕೀಲ ಭೂಪೆಂದರ್ ಸಿಂಗ್ ನ ಬಳಿ ಬಂದಿದ್ದಳು. ಆತ ಆ ಕೇಸನ್ನು ಕೈಗೆತ್ತಿಕೊಂಡು ಆಕೆಗೆ ನ್ಯಾಯ ದೊರಕಿಸಿಕೊಟ್ಟಿದ್ದ.
ಪ್ರತಿಫಲವಾಗಿ ಆಕೆ ವಕೀಲನಿಗೆ ಶುಲ್ಕವನ್ನು ಚಕ್ ಮೂಲಕ ಪಾವತಿಸಿದ್ದಳು. ಆದರೆ ಆ ಚಕ್ ಬೌನ್ಸ್ ಆಗಿದ್ದರಿಂದ ಆತ ಅವಳ ಮೇಲೆ ಕೇಸ್ ಹಾಕುವುದಾಗಿ ಪೀಡಿಸಿದ್ದ. ಆಕೆಯ ಅಸಹಾಯಕತೆ ಬಳಸಿಕೊಂಡು ಎರಡು ವರ್ಷಗಳ ಕಾಲ(2006ರಿಂದ 2008ರವರೆಗೆ) ಅತ್ಯಾಚಾರ ನಡೆಸಿದ್ದ.
ಈ ವರ್ಷದ ಜನವರಿಯಲ್ಲಿ 33 ವರ್ಷದ ಆಕೆ ಮದುವೆಯಾಗಿದ್ದಳು. ಮತ್ತೆ ಪುನಃ ಭೂಪೆಂದರ್ ಸಿಂಗ್ ಲೈಂಗಿಕವಾಗಿ ಪೀಡಿಸಲು ಆರಂಭಿಸಿದ. ಮದುವೆಯಾದ ನಂತರವೂ ಈತನ ಉಪಟಳ ಮಿತಿಮೀರಿದ್ದನ್ನು ಕಂಡು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಭೂಪೆಂದರ್ ಸಿಂಗ್ ನನ್ನು ಕಂಬಿಯ ಹಿಂದಕ್ಕೆ ಕಳುಹಿಸಲಾಗಿದೆ.












Click it and Unblock the Notifications