ಪೊಲೀಸರು ಶರಣಾಗು ಎಂದಾಗ, ಮಗುವಿಗೆ ಚಾಕು ಹಿಡಿದ

ಚೀನಾದಲ್ಲಿ ನಿನ್ನೆ ಇಂತಹ ಘಟನೆಯೊಂದು ನಡೆದಿದೆ. 34 ವರ್ಷದ ಝಾಂಗ್ ಗಾಂಗ್ ಕಾರೊಂದಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ. ಪೊಲೀಸರು ಕಾರು ನಿಲ್ಲಿಸಲು ಹೇಳಿದರೂ ನಿಲ್ಲಿಸಲಿಲ್ಲ. ಕೊನೆಗೆ ಪೊಲೀಸರು ನಾಕಾಬಂದಿ ತರಹ ಮಾಡಿ ಆತನ ಕಾರನ್ನು ಹೇಗೋ ನಿಲ್ಲಿಸಿದರು.
ಆಗ ಕಾರಿಂದ ಇಳಿದ ಝಾಂಗ್ ತನ್ನ ಪುಟ್ಟ ಮಗಳನ್ನು ಕೈಗೆತ್ತಿಕೊಂಡ. ಸಾಮುರಾಯಿ ಸ್ವಾರ್ಡ್ ಎಂಬ ಹರಿತವಾದ ಚಾಕುವಿನಿಂದ ಮಗುವನ್ನು ಕೊಲ್ಲುತ್ತೇನೆ ಎಂದು ಪೋಲಿಸರನ್ನು ಬೆದರಿಸಿದ. ಕೆಲವು ಕ್ಷಣಗಳ ಕಾಲ ಎಲ್ಲರೂ ಉಸಿರು ಬಿಗಿಹಿಡಿದುಕೊಂಡಿದ್ದರು. ಆತನ ಅವತಾರ ಸಾಮುರಾಯಿ ಸೈನಿಕರ ತರಹ ಇತ್ತು.
ಕಾರಿನಲ್ಲಿ ಆತನ ಪತ್ನಿ ಕೂಡ ಇದ್ದಳು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮಗು ಜೋರಾಗಿ ಅಳುತ್ತಿದ್ದರೂ ಲೆಕ್ಕಿಸದೇ ಹರಿತವಾದ ಚಾಕುವನ್ನು ಮಗುವಿನ ಹೊಟ್ಟೆಗೆ ತಾಗಿಸಿ ಹಿಡಿದುಕೊಂಡಿದ್ದ. ಕೊನೆಗೆ ಪೊಲೀಸರು ಹೇಗೋ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.











Click it and Unblock the Notifications