ಮಹಿಳೆಯರಿಗೆ ಬಾರ್ ಟೆಂಡರ್ ಕೆಲ್ಸ ಇಲ್ಲ: ಮಿರ್ಜಿ
ಬೆಂಗಳೂರು,
ಜೂ.1: ನಗರದ ಪ್ರತಿಷ್ಠಿತ ಬಾರ್, ಪಬ್ ಗಳ ಅವಧಿ ವಿಸ್ತರಣೆ ಗೊಂದಲ ಕೊಂಚ ತಿಳಿಯಾಗುತ್ತಿದ್ದಂತೆ ಪೊಲೀಸರ ಕಣ್ಣು ಬಾರ್ ಟೆಂಡರ್ಸ್ ಮೇಲೆ ಬಿದ್ದಿದೆ. ಪಬ್, ಬಾರ್ ಗಳಲ್ಲಿ ಮದ್ಯ ಹಾಗೂ ಆಹಾರ ಸರ್ವ್ ಮಾಡುತ್ತಿದ್ದ ಬಾರ್ ಟೆಂಡರ್ ಮಹಿಳೆಯರು ಇನ್ಮುಂದೆ ಕೆಲ್ಸ ಕಳೆದುಕೊಳ್ಳಲಿದ್ದಾರೆ. ಮದ್ಯದಂಗಡಿ, ಬಾರ್ ಹಾಗೂ ರೆಸ್ಟೋರೆಂಟ್, ಪಬ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮದ್ಯ ನೀಡುತ್ತಿದ್ದ ಮಾನಿನಿಯರ ಕೆಲಸ ಪೊಲೀಸರು ಬ್ರೇಕ್ ಹಾಕಿದ್ದಾರೆ. id="toptextpromo">ಬಾರ್
ಟೆಂಡರ್ ಕೆಲಸ ಕೊಡಿಸುವ ನೆಪದಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು ಕರೆತಂದು ಬಲವಂತವಾಗಿ ಬಾರ್ ಗರ್ಲ್ ಗಳನ್ನಾಗಿ ಮಾಡಲಾಗುತ್ತಿದೆ. ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುವಂತೆ ಒತ್ತಡ ಹೇರಲಾಗುತ್ತಿದೆ. ಆ ಮೂಲಕ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಹಿಳೆಯರು ಮದ್ಯದಂಗಡಿಗಳಲ್ಲಿ ಕೆಲಸ ಮಾಡಬಾರದು ಎಂದು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಸೂಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರವೇಶ
ನಿರಾಕರಿಸಿದರೆ ಕ್ರಮ: ಎಲ್ಲಾ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ಮಿರ್ಜಿ ಹೇಳಿದ್ದಾರೆ.











Click it and Unblock the Notifications