ನಕಲಿ ದಾಖಲೆ ಸೃಷ್ಟಿಸಿ ಕೋಟಿಗಟ್ಟಲೆ ಬಾಚಿದ ಮಹಿಳೆ
ಬೆಂಗಳೂರು
ಜೂ 2 : ನಕಲಿ ದಾಖಲೆ ಸೃಷ್ಟಿಸಿ ಕೋಟಿಗಟ್ಟಲೆ ದುಡ್ಡು ಬಾಚುತ್ತಿದ್ದ ವಂಚಕಿಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಪುರ ರಸ್ತೆ ಯಲಚೇನಹಳ್ಳಿ ನಿವಾಸಿಯಾದ 51 ವರ್ಷದ ವಯಸ್ಸಿನ ಉಮಾ ಎಂಬ ಹೆಂಗಸು ನಕಲಿ ಭೂ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ಅಧಿಕಾರಿಗಳ ಸಹಿ, ಸೀಲ್ ಹಾಕಿ ಬ್ಯಾಂಕ್ ಲೋನ್ ಪಡೆಯುತ್ತಿದ್ದಳು ಎಂದು ಪೊಲೀಸರು ಹೇಳಿದರು. id="toptextpromo">ಕೇವಲ
ಹದಿನೈದು ದಿನಗಳಲ್ಲಿ ಗೃಹಸಾಲ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದ ಉಮಾ, ಲೋನ್ ಸಿಕ್ಕ ತಕ್ಷಣ, ತನ್ನ ನಾಲ್ಕು ಜನ ಸಹಚರರೊಡನೆ ಹಣವನ್ನು ಖರ್ಚು ಮಾಡುತ್ತಿದ್ದಳು. ಸಹಿ ಫೋರ್ಜರಿ ಮಾಡುವಲ್ಲಿ ನಿಷ್ಣಾತರಾಗಿದ್ದ ಈ ತಂಡ ಬಿಡಿಎ ಅಧಿಕಾರಿಗಳ ಸೀಲು ತಯಾರಿಸಿ ಇಟ್ಟುಕೊಂಡಿತ್ತು. ಬ್ಯಾಂಕ್ ಅಧಿಕಾರಿಗಳಿಗೆ ಒಂದಿಷ್ಟು ಸುಳಿವು ಸಿಗದಂತೆ ಲೋನ್ ಪಡೆಯುತ್ತಿದ್ದರು. ಲೋನ್ ಪಡೆದ ನಂತರ ಕೆಲ ಅಧಿಕಾರಿಗಳಿಗೆ ಇಷ್ಟಿಷ್ಟೂ ಕಮಿಷನ್ ಕೂಡಾ ಸಲ್ಲುತ್ತಿತ್ತು. id='are-slot-1' class='oiad oi-axt oiadv'> id='top-searched-articles'>ನಗರ
ನಾಲ್ಕು ಬೇರೆ ಬೇರೆ ಬ್ಯಾಂಕ್ ಗಳಿಂದ ಸುಮಾರು ಒಂದು ಕೋಟಿ ವರೆಗೂ ಲೋನ್ ಪಡೆದಿರುವುದಾಗಿ ಉಮಾ ಹೇಳಿದ್ದಾಳೆ. ಬ್ಯಾಂಕ್ ಅಧಿಕಾರಿಗಳಿಗೂ ಸಮನ್ಸ್ ಜಾರಿ ಮಾಡಲಾಗಿದ್ದು, ಈ ವಂಚನೆ ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಪಾಲುದಾರರಾಗಿರುವ ಸಾಧ್ಯತೆಯಿದೆ. ಸಿಐಡಿಗೆ ಹಲವು ದಿನಗಳಿಂದ ಬೇಕಾಗಿದ್ದ ಈ ಮಹಾನ್ ವಂಚಕಿ ಐದು ವರ್ಷಗಳಿಂದ ತನ್ನ ವಂಚನೆ ಜಾಲವನ್ನು ವಿಸ್ತರಿಸುತ್ತಾ ಬಂದಿದ್ದಳು ಎಂದು ಉಪ ಆಯುಕ್ತ ನ್ಯಾಮೇಗೌಡ ತಿಳಿಸಿದರು.











Click it and Unblock the Notifications